ಹೊಸ ಸಿನಿಮಾ ಘೋಷಣೆ ಮಾಡಿದ ನಟಿ ಮೇಘನಾ ರಾಜ್

19-Sep 2023

Pic credit - Instagram

ಮೇಘನಾ ರಾಜ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ‘ಅಮರ್ಥ’ ಎನ್ನುವ ಶೀರ್ಷಿಕೆ ಇಡಲಾಗಿದೆ.

ಹೊಸ ಸಿನಿಮಾ

ಮೇಘನಾ ರಾಜ್ ಅವರು ಗಣೇಶ್ ಚತುರ್ಥಿ ದಿನದಂದು ಈ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಹೀರೋ.

ಶ್ರೀನಗರ ಕಿಟ್ಟಿ

ಮೇಘನಾ ರಾಜ್ ಚಿತ್ರವನ್ನು ವಿನಯ್ ಪ್ರೀತಮ್, ಗುರು ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಪೋಸ್ಟರ್​ನಲ್ಲಿ ಈ ವಿಚಾರ ತಿಳಿಸಲಾಗಿದೆ.

ನಿರ್ದೇಶನ

ಕನ್ನಯ್ಯ ಸದಾಶಿವ್ ಶೆಟ್ಟಿ ಹಾಗೂ ಗುರು ಹೆಗಡೆ ಅವರು ‘ಅಮರ್ಥ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆಯೂ ತಿಳಿಸಲಾಗಿದೆ.

ನಿರ್ಮಾಣ

ಮೇಘನಾ ರಾಜ್ ಅವರು ಇಷ್ಟು ದಿನ ‘ತತ್ಸಮ ತದ್ಭವ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದರು. ಈಗ ಅವರು ಹೊಸ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

ಪ್ರಮೋಷನ್​ನಲ್ಲಿ ಬ್ಯುಸಿ

ಸರ್ಜಾ ಅವರ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ. ಧ್ರುವ ಸರ್ಜಾ ಅವರು ಎರಡನೇ ಬಾರಿಗೆ ತಂದೆ ಆಗಿದ್ದಾರೆ.

ಕುಟುಂಬದಲ್ಲಿ ಖುಷಿ

ಮಗ ರಾಯನ್ ರಾಜ್ ಸರ್ಜಾನ ಆರೈಕೆಯಲ್ಲೂ ಮೇಘನಾ ರಾಜ್ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಅವರು ಆಗಾಗ ಮಾಹಿತಿ ನೀಡುತ್ತಾರೆ.

ಮಗನ ಆರೈಕೆ

ವೀಣೆ ಹಿಡಿದು ಬಂದ ನಟಿ ರಂಜನಿ ರಾಘವನ್