18-09-2023

1 ಪಂದ್ಯ, ಹಲವು ದಾಖಲೆ: ಮೊಹಮ್ಮದ್ ಸಿರಾಜ್ ರೆಕಾರ್ಡ್ ಲಿಸ್ಟ್ ಇಲ್ಲಿದೆ

ಮೊಹಮ್ಮದ್ ಸಿರಾಜ್

ಏಷ್ಯಾಕಪ್ 2023ರ ಫೈನಲ್'ನಲ್ಲಿ ಶ್ರೀಲಂಕಾ ವಿರುದ್ಧ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಹಲವು ದಾಖಲೆ ನಿರ್ಮಾಣ ಮಾಡಿದ್ದಾರೆ.

ವೇಗದ 5 ವಿಕೆಟ್

16 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿ ಅತ್ಯಂತ ವೇಗವಾಗಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎಂಬ ದಾಖಲೆಯನ್ನು ಮೊಹ್ಮದ್ ಸಿರಾಜ್ ಮಾಡಿದ್ದಾರೆ.

1 ಓವರ್​ನಲ್ಲಿ 4 ವಿಕೆಟ್

ಭಾರತ ಕ್ರಿಕೆಟ್ ತಂಡದ ಪರ ಒಂದೇ ಓವರ್​ನಲ್ಲಿ 4 ವಿಕೆಟ್ ಪಡೆದ ಮೊಟ್ಟ ಮೊದಲ ಬೌಲರ್ ಇದೀಗ ಮೊಹಮ್ಮದ್ ಸಿರಾಜ್ ಆಗಿದ್ದಾರೆ.

ವಿಶ್ವ ದಾಖಲೆ

ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೇವಲ 16 ಎಸೆತಗಳಲ್ಲಿ ಸಿರಾಜ್ ಈ ಸಾಧನೆ ಮಾಡಿದ್ದಾರೆ.

50 ವಿಕೆಟ್

ಮೊಹಮ್ಮದ್ ಸಿರಾಜ್ ಏಕದಿನ ಕ್ರಿಕೆಟಿನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 50 ವಿಕೆಟ್ ಪೂರೈಸಿದ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

2ನೇ ಬೌಲರ್

ಏಷ್ಯಾಕಪ್ ಇತಿಹಾಸದಲ್ಲೇ 6 ವಿಕೆಟ್ ಕಬಳಿಸಿದ 2ನೇ ಬೌಲರ್ ಎಂಬ ಹೆಗ್ಗಳಿಕೆ ಮೊಹಮ್ಮದ್ ಸಿರಾಜ್ ಪಾತ್ರರಾಗಿದ್ದಾರೆ.

ಮೊದಲ ಭಾರತೀಯ

ಏಕದಿನ ಕ್ರಿಕೆಟಿನ ಫೈನಲ್ ಪಂದ್ಯದಲ್ಲಿ ಅತ್ಯಧಿಕ ವಿಕೆಟ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ 3ನೇ ಬೌಲರ್ ಎಂಬ ಸಾಧನೆ ಸಿರಾಜ್ ಮಾಡಿದ್ದಾರೆ.

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಯಾವಾಗ?, ಎಷ್ಟು ಗಂಟೆಗೆ?