ಮೈಸೂರಿನ ದೊಡ್ಡ ಗಡಿಯಾರಕ್ಕೆ ನವೀಕರಣ ಭಾಗ್ಯ

08 Dec 2023

Author: Vivek Biradar

ಶಿಥಿಲಾವಸ್ಥೆ ತಲುಪಿದ್ದ ಮೈಸೂರಿನ ದೊಡ್ಡ ಗಡಿಯಾರ ನವೀಕರಣವಾಗುತ್ತಿದೆ.  

43 ಲಕ್ಷ ರೂ. ವೆಚ್ಚದಲ್ಲಿ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ದೊಡ್ಡ ಗಡಿಯಾರ ಗೋಪುರವನ್ನು ನವೀಕರಣ ಮಾಡುತ್ತಿದೆ.

75 ಅಡಿ ಎತ್ತರದ ದೊಡ್ಡ ಗಡಿಯಾರದ ಗೋಪುರ, ಗೋಡೆಯಲ್ಲಿ ಬಿರುಕಾಗಿತ್ತು ಮತ್ತು ಮೆಟ್ಟಿಲಿನ ಕೆಳಭಾಗ ಕುಸಿಯುವ ಹಂತ ತಲುಪಿದ್ದರಿಂದ ನವೀಕರಿಸಲಾಗುತ್ತಿದೆ.    

ದೊಡ್ಡ ಗಡಿಯಾರವನ್ನು "ರಜತ ಮಹೋತ್ಸವ ಗಡಿಯಾರ ಗೋಪುರ"ವೆಂದೂ ಕರೆಯುತ್ತಾರೆ.

ದೊಡ್ಡ ಗಡಿಯಾರ ಗೋಪುರವನ್ನು 1927 ರಲ್ಲಿ ನಿರ್ಮಿಸಲಾಗಿದೆ. 

ಮೈಸೂರಿನ ಮಹಾರಾಜರಾದ ಆರನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ರಜತ ಮಹೋತ್ಸವದ ನೆನಪಿಗಾಗಿ 1927ರಲ್ಲಿ ನಿರ್ಮಿಸಲಾಯಿತು. 

ಸಣ್ಣ ಗಡಿಯಾರ ಗೋಪುರ ಕೆಆರ್ ಸರ್ಕಲ್ ಬಳಿ ಇರುವ ಡಫರಿನ್ ಗಡಿಯಾರ ಗೋಪುರವಾಗಿದೆ.

ಟಾಪ್ ನಟಿ ಶ್ರೀಲೀಲಾ ಎಂಥಹಾ ಬಹುಮುಖ ಪ್ರತಿಭೆಯೆಂಬುದು ಗೊತ್ತೆ?