ಟಾಪ್ ನಟಿ ಶ್ರೀಲೀಲಾ ಎಂಥಹಾ ಬಹುಮುಖ ಪ್ರತಿಭೆಯೆಂಬುದು ಗೊತ್ತೆ?

07 DEC 2023

Author : Manjunatha

ಕನ್ನಡದ ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಒಂದರ ಹಿಂದೊಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕನ್ನಡದ ನಟಿ ಶ್ರೀಲೀಲಾ

ಉತ್ತಮ ನಟಿ, ಅತ್ಯುತ್ತಮ ಡ್ಯಾನ್ಸರ್ ಸಹ ಆಗಿರುವ ಶ್ರೀಲೀಲಾಗೆ ಇರುವ ಇನ್ನಿತರೆ ಪ್ರತಿಭೆಗಳ ಬಗ್ಗೆ ಇತ್ತೀಚೆಗೆ ತೆಲುಗು ಸ್ಟಾರ್ ನಟರೊಬ್ಬರು ಹೆಮ್ಮೆಯಿಂದ ಮಾತನಾಡಿದ್ದಾರೆ.

ಶ್ರೀಲೀಲಾ ಪ್ರತಿಭೆ

ನಟಿ ಶ್ರೀಲೀಲಾ ಒಳ್ಳೆಯ ಡ್ಯಾನ್ಸರ್ ಆಗಿರುವ ಜೊತೆಗೆ ಅವರಿಗೆ ಕೂಚುಪುಡಿ ಹಾಗೂ ಭರತನಾಟ್ಯಗಳು ಸಹ ಗೊತ್ತು.  

ಕೂಚುಪುಡಿ ಭರತನಾಟ್ಯ

ನೃತ್ಯ ಮಾತ್ರವೇ ಅಲ್ಲದೆ ಸಂಗೀತವನ್ನೂ ಶ್ರೀಲೀಲಾ ಕಲಿತಿದ್ದಾರೆ, ಶ್ರೀಲೀಲಾ ಸುಂದರವಾಗಿ ವೀಣೆ ನುಡಿಸಬಲ್ಲರು.

ವೀಣೆ ನುಡಿಸಬಲ್ಲರು

ಶ್ರೀಲೀಲಾ ವಿಧ್ಯಾಭ್ಯಾಸದಲ್ಲಿ ಟಾಪ್, ಪ್ರಸ್ತುತ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಎಳವೆಯಿಂದಲೂ ತರಗತಿಯಲ್ಲಿ ಅವರೇ ಫಸ್ಟ್ ಅಂತೆ.

ಎಂಬಿಬಿಎಸ್ ವಿಧ್ಯಾರ್ಥಿ

ಶ್ರೀಲೀಲಾ ಓದಿನಲ್ಲಿ ಮಾತ್ರವಲ್ಲ ಕ್ರೀಡೆಯಲ್ಲಿಯೂ ಟಾಪ್. ಹಾಕಿ ಮತ್ತು ಈಜು ಸ್ಪರ್ಧೆಯಲ್ಲಿ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಗೆದ್ದಿದ್ದಾರೆ.

ಕ್ರೀಡೆಯಲ್ಲಿಯೂ ಟಾಪ್

ಓದಿನಲ್ಲಿ ಸದಾ ಮುಂದಿರುವ ಶ್ರೀಲೀಲಾ ಹೊಸ-ಹೊಸ ವಿಷಯಗಳನ್ನು ಕಲಿಯುತ್ತಲೇ ಇರುತ್ತಾರಂತೆ.

ಹೊಸ ಕಲಿಕೆ

ಶ್ರೀಲೀಲಾ ಪ್ರಸ್ತುತ ತೆಲುಗಿನ ಅತ್ಯಂತ ಬ್ಯುಸಿ ನಟಿ, ಪವನ್ ಕಲ್ಯಾಣ್, ಮಹೇಶ್ ಬಾಬು, ವಿಜಯ್ ದೇವರಕೊಂಡ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.

ಟಾಪ್ ನಟಿ

ಬಾಲಿವುಡ್​ನಿಂದ ಬರಲಿದ್ದಾರೆ ಯಶ್ ಸಿನಿಮಾಕ್ಕೆ ನಾಯಕಿ: ಯಾರದು?