08-12-2023
ಮೈಸೂರು: ಬೆಂಕಿಯಲ್ಲಿ ಸಿಲುಕುತ್ತಿದ್ದ10 ಅಡಿ ಉದ್ದದ ಹೆಬ್ಬಾವು ರಕ್ಷಣೆ
Author: Gangadhar Saboji
ಮೈಸೂರು ತಾಲ್ಲೂಕು ದುದ್ದುಗೆರೆ ಗ್ರಾಮದ ಫಾರ್ಮ್ ಹೌಸ್ ಬಳಿ ಘಟನೆ ನಡೆದಿದೆ.
ಹೆಬ್ಬಾವು ಜಮೀನು ಕಡೆ ಹೋಗದಂತೆ ಬೆಂಕಿ ಹಾಕಲಾಗಿತ್ತು.
ಸುಮಾರು 10 ಅಡಿಗೂ ಹೆಚ್ವು ಉದ್ದವಿದ್ದ ಹೆಬ್ಬಾವು ಬೆಂಕಿಯಲ್ಲಿ ಸಿಲುಕಿತ್ತು.
ಸ್ನೇಕ್ ಪ್ರಶಾಂತ್ ಸ್ಥಳಕ್ಕೆ ಆಗಮಿಸಿ ಹೆಬ್ಬಾವು ರಕ್ಷಣೆ ಮಾಡಿದ್ದಾರೆ.
50 ಲೀಟರ್ ನೀರಿನ ಟ್ಯಾಂಕ್‌ನಲ್ಲಿ ಹೆಬ್ಬಾವು ರಕ್ಷಣೆ ಮಾಡಲಾಗಿದೆ.
ನಂತರ ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಹೆಬ್ಬಾವುವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ.
NEXT: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡಿದೆ.