97 ತೇಜಸ್ ಜೆಟ್‌, 150 ಹೆಲಿಕಾಪ್ಟರ್‌: ದೇಶೀಯ ಸಂಸ್ಥೆಗಳಿಂದ 1.5 ಲಕ್ಷ ಕೋಟಿ ರೂ.  ರಕ್ಷಣಾ ಉಪಕರಣ ಖರೀದಿಗೆ ಡಿಎಸಿ ಅನುಮತಿ

30 November 2023

Author: akshay pallamajalu 

ರಕ್ಷಣಾ ಸ್ವಾಧೀನ ಮಂಡಳಿ ( ಡಿಎಸಿ ) ಗುರುವಾರ ದೇಶಿಯ ಕಂಪನಿಗಳಿಂದ ರೂ 1.5 ಲಕ್ಷ ಕೋಟಿ ರಕ್ಷಣಾ ಉಪಕರಣಗಳನ್ನು ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ .

97 ಹೊಸ LCA ಮಾರ್ಕ್ 1A ಫೈಟರ್ ಏರ್‌ಕ್ರಾಫ್ಟ್‌ಗಳನ್ನು ಖರೀದಿಸಲಾಗುವುದು. 

84 Su-30 MKI ಯುದ್ಧ ವಿಮಾನವನ್ನು ಸ್ವದೇಶಿಯಾಗಿ ನವೀಕರಿಸಲಾಗುವುದು ಎಂದು  ಸಭೆಯಲ್ಲಿ ಚರ್ಚೆಸಲಾಗಿದೆ. 

ಹೆಚ್ಚುವರಿ ಬ್ಯಾಚ್ 97 ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್, ಎಸ್‌ಯು-30 ಫೈಟರ್ ಏರ್‌ಕ್ರಾಫ್ಟ್‌ಗಳು ಮತ್ತು ಸುಮಾರು 150 ಪ್ರಚಂದ್ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳ ಖರೀದಿಗೆ ಅನುಮತಿ ನೀಡಿದೆ.

ಇದಕ್ಕಾಗಿ ರಕ್ಷಣಾ ಸಚಿವಾಲಯವು 1.3 ಲಕ್ಷ ಕೋಟಿ ಮೌಲ್ಯದ ಭಾರತದ ಎರಡು ಅತಿದೊಡ್ಡ ಯುದ್ಧ ವಿಮಾನ ತೆಗೆದುಕೊಳ್ಳಲು ನಿರ್ಧರಿಸಿದೆ. 

ಭಾರತೀಯ ವಾಯುಪಡೆಯು ಈಗಾಗಲೇ 83 LCA Mark1A ಫೈಟರ್ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಇದು 2024ರಲ್ಲಿ ಫೆಬ್ರವರಿಯಲ್ಲಿ ಸೇನೆ ಕೈಗೆ ಸೇರಲಿದೆ ಎಂದು ಹೇಳಿದೆ. 

97 ವಿಮಾನಗಳ ಮೌಲ್ಯವು ಸುಮಾರು 65,000 ಕೋಟಿ ರೂಪಾಯಿಗಳಾಗಬಹುದು ಇದು ಅತಿದೊಡ್ಡ ಯುದ್ಧ ವಿಮಾನ ಒಪ್ಪಂದವಾಗಿದೆ ಎಂದು ಹೇಳಿದೆ.

ಭಾರತೀಯ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಈ ವಿಮಾನದ ಸಂಪೂರ್ಣ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯವನ್ನು ಮಾಡಲಿದೆ.