30 Nov 2023
Author: akshay pallamajalu
ಭಾರತವು ತನ್ನ ಜಿ 20 ಅಧ್ಯಕ್ಷೀಯ ಅವಧಿಯಲ್ಲಿ ಅಸಾಧಾರಣವಾದ ಸಾಧನೆಯನ್ನು ಮಾಡಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಭಾರತ 2023ರ ಜಿ 20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿತ್ತು. ಈ ಸಭೆ ವಿಶ್ವದ ಎಲ್ಲರ ಗಮನ ಸೆಳೆದಿದೆ.
ಇದೀಗ ಡಿಸೆಂಬರ್ 1ರಿಂದ ಬ್ರೆಜಿಲ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಮೋದಿ ಅವರು ಜಿ 20 ಶೃಂಗಸಭೆ ಅಧ್ಯಕ್ಷತೆಯನ್ನು ಬ್ರೆಜಿಲ್ ಪ್ರಧಾನಿಗೆ ವಹಿಸಿದರು.
ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆ ಭಾರೀ ಮಹತ್ವವನ್ನು ಪಡೆದಿತ್ತು. ಅನೇಕ ದೇಶಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಿದರು.
ಭಾರತ ಇಲ್ಲಿಗೆ ಸಭೆಯ ಅಧ್ಯಕ್ಷತೆ ವಹಿಸಿ 365 ದಿನಗಳು ಕಳೆದಿವೆ. ಈ ಸಭೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ಚೇತರಿಕೆ, ಆರ್ಥಿಕ ಬಿಕ್ಕಟ್ಟು, ಹವಾಮಾನ, ರಾಷ್ಟ್ರಗಳ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಮೋದಿ ಹೇಳಿದ್ದಾರೆ.
ಈ ಜಿ 20 ಶೃಂಗಸಭೆಯು ವಸುಧೈವ ಕುಟುಂಬಕಂ ಎಂಬ ವಿಷಯದ ಮೇಲೆ ನಡೆಯಿತು. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ದ ಚೈತನ್ಯವನ್ನು ಪ್ರತಿಬಿಂಬಿಸಲು, ಮರುಸೃಷ್ಟಿಸಲು ಮತ್ತು ಪುನರುಜ್ಜೀವನಗೊಳಿಸು ಅರ್ಥವನ್ನು ಇದು ನೀಡಿತ್ತು ಎಂದು ಮೋದಿ ಅವರು ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯನ್ನು ಮೋದಿ ಅವರು ನೆನಪಿಸಿಕೊಂಡಿದ್ದಾರೆ. ಭಾರತ ಜಗತ್ತಿನ ಮುಂದೆ ತನ್ನ ನಿಲುವನ್ನು ಯಥಾಸ್ಥಿತಿಯಾಗಿ ಕಾಪಾಡಿಕೊಂಡು ಬಂದಿದೆ. ಭಾರತವನ್ನು ನೋಡಿ ಜಗತ್ತಿನ ಬೇರೆ ಬೇರೆ ದೇಶಗಳು ಜಿಡಿಪಿಯಿಂದ ಮಾನವೀಯ ವಿಚಾರಗಳತ್ತ ಬರುತ್ತಿದೆ ಎಂದು ಹೇಳಿದರು.