ಅಯೋಧ್ಯೆ ರಾಮಮಂದಿರ ಭದ್ರತೆಗೆ ಎಐ ತಂತ್ರಜ್ಞಾನ

11-01-2024

ಅಯೋಧ್ಯೆ ರಾಮಮಂದಿರ ಭದ್ರತೆಗೆ ಎಐ ತಂತ್ರಜ್ಞಾನ

Author: ಗಣಪತಿ ಶರ್ಮ

TV9 Kannada Logo For Webstory First Slide
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಭರದಿಂದ ಸಿದ್ಧತೆ ಸಾಗುತ್ತಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಭರದಿಂದ ಸಿದ್ಧತೆ ಸಾಗುತ್ತಿದೆ.

ಈಗಾಗಲೇ ಕೆಲವು ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಮೇಲ್‌ಗಳು ಬಂದಿರುವುದರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಕೆಲವು ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಮೇಲ್‌ಗಳು ಬಂದಿರುವುದರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಸೆಲೆಬ್ರಿಟಿಗಳು ಮತ್ತು ಭಕ್ತರು ಪಾಲ್ಗೊಳ್ಳಲಿದ್ದಾರೆ.

ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಸೆಲೆಬ್ರಿಟಿಗಳು ಮತ್ತು ಭಕ್ತರು ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಮ ಮಂದಿರದ ಭದ್ರತೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಭದ್ರತೆಗಾಗಿ ಎಐಗೆ ಸಂಬಂಧಿಸಿದ ಸುಧಾರಿತ ಉಪಕರಣಗಳನ್ನು ಖರೀದಿಸಲಾಗುತ್ತಿದೆ.

ಗುಪ್ತಚರ ಏಜೆನ್ಸಿಗಳು ಈಗಾಗಲೇ ಎಐ ಆಧಾರಿತ ಭದ್ರತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಆರಂಭಿಸಿವೆ.

ಎಐ ಮೂಲಕ ಅಯೋಧ್ಯೆಯ ಎಲ್ಲಾ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಜನರನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬಹುದಾಗಿದೆ.

ಎಐ ಮೂಲಕ ದೇವಾಲಯದ ಪ್ರತಿಯೊಂದು ಭಾಗದಲ್ಲೂ ಮೇಲ್ವಿಚಾರಣೆ ಮಾಡಬಹುದು. ಪೊಲೀಸ್ ಡೇಟಾಬೇಸ್‌ನಲ್ಲಿರುವ ಕ್ರಿಮಿನಲ್‌ಗಳ ಮೇಲೂ ನಿಗಾ ಇಡಬಹುದಾಗಿದೆ.