Cyclone Michaung: ಮುಂದಿನ 48 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ
akshay pallamajalu
ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲಿನ ಕಡಿಮೆ ಒತ್ತಡದ ಪ್ರದೇಶವಾಗಿ ಬದಲಾಗುತ್ತಿದೆ.
ಮುಂದಿನ ಕೆಲವು ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವಾಗಿ, ಇದು ತೀವ್ರಗೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಗಾಳಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಸುವ ಸಾಧ್ಯತೆಯಿದೆ.
48 ಗಂಟೆಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ನವೆಂಬರ್ 30ರ ವೇಳೆಗೆ ಅಂದರೆ ನಾಳೆ ಚಂಡಮಾರುತವು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುತ್ತದೆ ಮತ್ತು ಇದರ ಪರಿಣಾಮ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗುತ್ತದೆ.
ಮೈಚಾಂಗ್ ಚಂಡಮಾರುತ 60-70 kmph ಗರಿಷ್ಠ ನಿರಂತರ ಗಾಳಿಯ ವೇಗವನ್ನು ಹೊಂದುವ ನಿರೀಕ್ಷೆಯಿದೆ, ಇದರ ಪರಿಣಾಮ 80 kmph ವರೆಗೆ ಇರುತ್ತದೆ.
ಹಿರಿಯ ಹವಾಮಾನಶಾಸ್ತ್ರಜ್ಞ ಜೇಸನ್ ನಿಕೋಲ್ಸ್ ಅವರು ಹೇಳಿರುವಂತೆ ಉಷ್ಣವಲಯದ ತಗ್ಗು ಮಲಯ ಪರ್ಯಾಯ ದ್ವೀಪವನ್ನು ಅಂಡಮಾನ್ ಸಮುದ್ರದ ಕಡೆಗೆ ದಾಟುತ್ತಿದೆ ಮತ್ತು ವಾರದ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಇದರ ಪರಿಣಾಮ ಉಂಟಾಗಬಹುದು.
ಮುಂದಿನ ವಾರದ ಆರಂಭದಲ್ಲಿ ಪೂರ್ವ ಭಾರತ ಅಥವಾ ಬಾಂಗ್ಲಾದೇಶಕ್ಕೆ ಚಂಡಮಾರುತ ಪರಿಣಾಮ ಎದುರಿಸಬಹುದು ಎಂದು ಹೇಳಾಗಿದೆ .