29 November 2023

ಮಣಿಪುರ ಹಿಂಸಾಚಾರ: 170 ಕ್ಕೂ ಹೆಚ್ಚು ಶವಗಳ ಅಂತಿಮ ಸಂಸ್ಕಾರಕ್ಕೆ ಸುಪ್ರೀಂ ನಿರ್ದೇಶನ

akshay pallamajalu 

ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ನಂತರ ಇಂಫಾಲ್‌ನ ಆಸ್ಪತ್ರೆಯ ಶವಾಗಾರದಲ್ಲಿರುವ 170 ಕ್ಕೂ ಹೆಚ್ಚು ಶವಗಳ ಅಂತಿಮ ಸಂಸ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನಗಳನ್ನು ನೀಡಿದೆ.

ರಾಜ್ಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರಿಂ ಈ ನಿರ್ದೇಶನವನ್ನು ನೀಡಿದೆ.

ಹಿಂಸಾಚಾರದಿಂದ ಕುಕ್ಕಿ ಸಮುದಾಯದ ವಕೀಲರು ಕುಕ್ಕಿ ಸಮುದಾಯದಲ್ಲಿ ಸಾವನ್ನಪ್ಪಿರುವವರನ್ನು ಸಾಮೂಹಿಕವಾಗಿ ಅಂತಿಮ ಸಂಸ್ಕಾರ ಅವಕಾಶ ನೀಡಬೇಕು.

ಕುಕ್ಕಿ ಸಮುದಾಯದಿಂದ ಸಾವನ್ನಪ್ಪಿದ್ದ 91 ಜನರನ್ನು ಸಾಮೂಹಿಕವಾಗಿ ಹೂಳಬೇಕು. ಜತೆಗೆ ನಮ್ಮಲ್ಲಿ ಸರ್ಕಾರವು ಗುರುತಿಸಿರುವ ಸೈಟ್‌ಗಳ ಪಟ್ಟಿಗಳು ಇಲ್ಲ ಎಂದು ಹೇಳಿದ್ದಾರೆ.

ಇದೀಗ ಸುಪ್ರೀಂ ಗಲಭೆಯಿಂದ ಸಾವನ್ನಪ್ಪಿರುವವರ ಕುಟುಂಬಕ್ಕೆ ಸರಿಯಾದ ಪರಿಹಾರ ನೀಡುವಂತೆ ರಾಜ್ಯಕ್ಕೆ ಆದೇಶ ನೀಡಿದೆ.

ಇಂಫಾಲ್‌ನ ಮೂರು ಸರ್ಕಾರಿ ಶವಾಗಾರಗಳಲ್ಲಿ ಪ್ರಸ್ತುತ 175 ಕ್ಕೂ ಹೆಚ್ಚು ಮೃತಗಳು ಇತ್ತು. ಆದರೆ ಅದರಲ್ಲಿ 81 ಶವಗಳನ್ನು ಅವರ ಕುಟುಂಬಕ್ಕೆ ಒಪ್ಪಿಸಲಾಗಿದೆ. ಇನ್ನೂ 88 ಶವಗಳು ಶವಾಗಾರದಲ್ಲಿದೆ.

ಇದೀಗ ಸುಪ್ರೀಂ ಗಲಭೆಯಿಂದ ಸಾವನ್ನಪ್ಪಿರುವವರ ಕುಟುಂಬಕ್ಕೆ ಸರಿಯಾದ ಪರಿಹಾರ ನೀಡುವಂತೆ ರಾಜ್ಯಕ್ಕೆ ಆದೇಶ ನೀಡಿದೆ.