ಈ ನವರಾತ್ರಿಯಲ್ಲಿ ನೀವು ಭೇಟಿ ನೀಡಬೇಕಾದ ದೇಶದ ದುರ್ಗಾ ದೇವಸ್ಥಾನಗಳು

15  ಅಕ್ಟೋಬರ್ 2023

Pic credit - Times Travel

ಕಲ್ಕಾ ದೇವಿ ದೇವಾಲಯ ದೆಹಲಿಯ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ದಕ್ಷಿಣ ದೆಹಲಿಯಲ್ಲಿದೆ. ನವರಾತ್ರಿ ಆಚರಣೆಗೆ ಇದು ಸೂಕ್ತ ಸ್ಥಳವಾಗಿದೆ.

ಕಲ್ಕಾಜಿ ದೇವಸ್ಥಾನ, ನವದೆಹಲಿ

Pic credit - Times Travel

ದಾಂತೇವಾಡದಲ್ಲಿರುವ ದಂತೇಶ್ವರಿ ದೇವಾಲಯವು ಬಸ್ತಾರ್​ ಪ್ರದೇಶದಲ್ಲಿನ ಒಂದು ಪ್ರಸಿದ್ಧ ದೇವಸ್ಥಾನವಾಗಿದೆ. ಇದು ವಿಶಿಷ್ಟವಾದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ.

ದಂತೇಶ್ವರಿ ದೇವಸ್ಥಾನ, ದಾಂತೇವಾಡ, ಛತ್ತೀಸ್​ಗಢ

Pic credit - Times Travel

ಈ ದೇವಾಲಯವು ದುರ್ಗೆಯ ಇನ್ನೊಂದು ರೂಪವಾದ ಮಹಾಲಕ್ಷ್ಮಿ ದೇವಿಗೆ ಅರ್ಪಿತವಾಗಿದೆ. ಇದು ಮುಂಬೈನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. 

ಮಹಾಲಕ್ಷ್ಮಿ ದೇವಸ್ಥಾನ, ಮುಂಬೈ, ಮಹಾರಾಷ್ಟ್ರ

Pic credit - Times Travel

ಪಶ್ಚಿಮ ಬಂಗಾಳ ದೇವಿ ಆರಾಧನೆಗೆ ಹೆಸರುವಾಸಿ. ಕೊಲ್ಕತ್ತಾದಲ್ಲಿರುವ ಈ ದೇವಾಲಯವು ದುರ್ಗೆಯ ಮತ್ತೊಂದು ಅವತಾರವಾದ ಕಾಳಿ ದೇವಿಗೆ ಸಮರ್ಪಿತವಾಗಿದೆ.

ಕಾಳಿಘಾಟ್​ ಕಾಳಿ ದೇವಸ್ಥಾನ, ಕೋಲ್ಕತ್ತಾ, ಪಶ್ಚಿಮ ಬಂಗಾಳ

Pic credit - Times Travel

ಧರ್ಮಶಾಲಾಕ್ಕೆ ಸಮೀಪದಲ್ಲಿರುವ ಈ ದೇವಾಲಯವು ಗರ್ಭಗುಡಿಯಲ್ಲಿರುವ ಬಂಡೆಯಲ್ಲಿ ಸದಾ ಜ್ವಾಲೆ ಉರಿಯುತ್ತಿರುತ್ತದೆ. ಹೀಗಾಗಿ ಈ ದೇವಸ್ಥಾನಕ್ಕೆ ಜ್ವಾಲಾಮುಖಿ ದೇವಸ್ಥಾನ ಎನ್ನುವರು.  

ಜ್ವಾಲಾಮುಖಿ ದೇವಸ್ಥಾನ, ಕಂಗ್ರಾ, ಹಿಮಾಚಲ ಪ್ರದೇಶ

Pic credit - Times Travel

ಈ ದೇವಾಲಯವು ಗಂಗಾನದಿಯ ದಡದಲ್ಲಿದೆ. ವಿಂಧ್ಯವಾಸಿನಿ ದೇವಿಯನ್ನು ಕಾಜಲಾ ದೇವಿ ಎಂದೂ ಕರೆಯುತ್ತಾರೆ, ಇದು ಕಾಳಿ ದೇವಿಯ ಇನ್ನೊಂದು ರೂಪವಾಗಿದೆ.  

ವಿಂಧ್ಯವಾಸಿನಿ ದೇವಸ್ಥಾನ, ವಿಂಧ್ಯಾಚಲ, ಉತ್ತರ ಪ್ರದೇಶ

Pic credit - Times Travel

ಇದು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಚಾಮುಂಡೇಶ್ವರಿ ದೇವಸ್ಥಾನವು ಚಾಮುಂಡಿ ಬೆಟ್ಟದ ಮೇಲಿದೆ. 

ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು, ಕರ್ನಾಟಕ

Pic credit - Times Travel

ಕಾಮಾಖ್ಯ ದೇವಾಲಯವು ಶಕ್ತಿ ಪೀಠಗಳಲ್ಲಿ ಒಂದಾಗಿದೆ ಮತ್ತು ಅಂಬುಬಾಚಿ ಜಾತ್ರೆಗೆ ಹೆಸರುವಾಸಿಯಾಗಿದೆ.

ಕಾಮಾಖ್ಯ ದೇವಸ್ಥಾನ, ಗುವಾಹಟಿ, ಅಸ್ಸಾಂ

Pic credit - Times Travel

ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ವೈಷ್ಣೋದೇವಿ ದೇವಾಲಯವು ತ್ರಿಕೂಟ ಪರ್ವತಗಳಲ್ಲಿ ನೆಲೆಗೊಂಡಿದೆ. 

ವೈಷ್ಣೋ ದೇವಿ, ಜಮ್ಮು

Pic credit - Times Travel

ಸೋನು ಶ್ರೀನಿವಾಸ್ ಗೌಡಗೆ ಇನ್ನೂ ಮುಗಿದಿಲ್ಲ ಮಾಲ್ಡೀವ್ಸ್ ಮೋಜು ಮಸ್ತಿ