ಮೈಸೂರು ದಸರಾ ದೀಪಾಲಂಕಾರಕ್ಕೆ ಚೀನಾ ತಂತ್ರಜ್ಞಾನ ಬಳಕೆಗೆ ಚಿಂತನೆ  

17 September 2024

Pic credit - Twitter

Author: Ayesha Banu

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯೇ ದೀಪಾಲಂಕಾರ. ಈ ಬಾರಿಯ ವಿಶೇಷ ಅಂದ್ರೆ ಅಂಬವಿಲಾಸ ಅರಮನೆಯ ದೀಪಾಲಂಕಾರಕ್ಕೆ ಸರಿಹೊಂದುವಂತೆ ವಾರ್ಮ್‌ ವೈಟ್‌ ಪರಿಕಲ್ಪನೆಯಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ.

ಮೈಸೂರು ದಸರಾ 

ಮೈಸೂರು ದಸರಾದ ದೀಪಾಲಂಕಾರಕ್ಕೆ ಈ ಬಾರಿ ಹೊಸತನ ಹಾಗೂ ಮೆರಗು ನೀಡಲು ಚಾಮುಂಡೇಶ್ವರಿ ವಿದ್ಯುತ್‌ ಕಂಪೆನಿ ಪ್ರಯತ್ನಕ್ಕೆ ಮುಂದಾಗಿದೆ.

ದಸರಾ ದೀಪಾಲಂಕಾರ 

ಚೀನಾದಲ್ಲಿ ದೀಪಾಲಂಕಾರಕ್ಕೆ ಬಳಸುವ ತಂತ್ರಜ್ಞಾನವನ್ನು ನಮ್ಮ ಮೈಸೂರು ದಸರಾ ದೀಪಾಲಂಕರಾದಲ್ಲೂ ಬಳಕೆ ಮಾಡಿಕೊಳ್ಳಬಹುದು ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆ. 

ಚೀನಾ ತಂತ್ರಜ್ಞಾನ

ಚೀನಾ ತಂತ್ರಜ್ಞಾನದಿಂದ ದೀಪಾಲಂಕಾರಕ್ಕೆ ಹೊಸ ಹೊಳಪು ಬರಲಿದೆ ಎನ್ನುವ ನಿರೀಕ್ಷೆಯಿದೆ

ಚೀನಾ ತಂತ್ರಜ್ಞಾನ

ಮೊದಲೆಲ್ಲಾ ದೀಪಾಲಂಕಾರಕ್ಕೆ ಸಾಮಾನ್ಯ ಬಲ್ಬ್‌ ಬಳಸಲಾಗುತ್ತಿತ್ತು. ನಂತರ ಎಲ್‌ಇಡಿ, ವಿವಿಧ ಆಕಾರದ ಬಲ್ಬ್‌ಗಳ ಬಳಕೆ ಹೆಚ್ಚಿಸಲಾಯಿತು.

ದಸರಾ ದೀಪಾಲಂಕಾರ

ಮೊದಲೆಲ್ಲಾ ದೀಪಾಲಂಕಾರಕ್ಕೆ ಸಾಮಾನ್ಯ ಬಲ್ಬ್‌ ಬಳಸಲಾಗುತ್ತಿತ್ತು. ನಂತರ ಎಲ್‌ಇಡಿ, ವಿವಿಧ ಆಕಾರದ ಬಲ್ಬ್‌ಗಳ ಬಳಕೆ ಹೆಚ್ಚಿಸಲಾಯಿತು.

ದಸರಾ ದೀಪಾಲಂಕಾರ

ತಂತ್ರಜ್ಞಾನ ಬಳಸಿಕೊಂಡು ವಿವಿಧ ಬಣ್ಣದ ದೀಪಾಲಂಕಾರ ಮಾಡಲಾಗುತ್ತಿದೆ. ದಸರಾಗೆ ತಿಂಗಳುಗಳ ಕಾಲ ಇಡೀ ಮೈಸೂರು ಕತ್ತಲಲ್ಲೂ ಲೈಟ್ಸ್​ಗಳಿಂದ ಮಿನುಗುತ್ತಿರುತ್ತದೆ.​

ದಸರಾ ದೀಪಾಲಂಕಾರ

ದೀಪಾಲಂಕಾರವನ್ನು ಡಿಜಿಟಲ್‌ ರೂಪದಲ್ಲಿ ದಾಖಲಿಸಲು ಒಂದು ಸಾವಿರ ಡ್ರೋನ್​ಗಳನ್ನು ಬಳಸಿ 135 ಕಿ.ಮೀ ಉದ್ದದ ದೀಪಾಲಂಕಾರದ ದೃಶ್ಯ ವೈಭವನ್ನು ಸೆರೆ ಹಿಡಿಯಲು ಚಿಂತಿಸಲಾಗುತ್ತಿದೆ. 

ಒಂದು ಸಾವಿರ ಡ್ರೋನ್