ದಾಸವಾಳ ಹೂವಿನ ಚಹದಿಂದ ಮುಜುಗರಕ್ಕೊಳಗಾದ ನಟಿ ನಯನತಾರ
229 July 2024
Manjunatha
ನಟಿ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಇದ್ದಾರಾದರೂ ಬಹಳ ಸಕ್ರಿಯ ಏನಲ್ಲ. ಸಮಕಾಲೀನ ಕೆಲ ನಟಿಯರಂತೆ ರೀಲ್ಸ್ಗಳು, ಫೋಟೊಶೂಟ್ ಮಾಡಿ ಫೋಟೊ ಹಂಚಿಕೊಳ್ಳುವುದಿಲ್ಲ.
ನಟಿ ನಯನತಾರಾ
ತೀರ ಅಪರೂಪಕ್ಕೆ ತಮ್ಮ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಜೊತೆಗೆ ತಮ್ಮ ಸಿನಿಮಾಗಳು, ತಮ್ಮ ಗೆಳೆಯರ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.
ಚಿತ್ರಗಳ ಹಂಚಿಕೊಳ್ಳುತ್ತಾರೆ
ಕೆಲವು ಬ್ರ್ಯಾಂಡ್ಗಳ ಪ್ರಚಾರವನ್ನೂ ಮಾಡುವ ನಯನತಾರಾ ಆಗಾಗ್ಗೆ ಕೆಲವು ಆರೋಗ್ಯ, ಸೌಂದರ್ಯದ ಟಿಪ್ಸ್ಗಳನ್ನು ಸಹ ಕೊಡುತ್ತಾ ಇರುತ್ತಾರೆ.
ಸೌಂದರ್ಯದ ಟಿಪ್ಸ್ಗಳು
ಅಂತೆಯೇ ಇತ್ತೀಚೆಗೆ ದಾಸವಾಳ ಹೂವಿನ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು ನಯನತಾರಾ. ಇದರಿಂದಾಗಿ ಮುಜುಗರಕ್ಕೆ ಒಳಗಾಗಿದ್ದಾರೆ.
ದಾಸವಾಳ ಹೂವಿನ ಟೀ
ದಾಸವಾಳದಲ್ಲಿ ವಿಟಮಿನ್ ಹೆಚ್ಚು ಇರುತ್ತದೆ, ಚಳಿ, ಮಳೆಗಾಲದಲ್ಲಿ ಇದು ದೇಹದ ಆರೋಗ್ಯ ಹೆಚ್ಚಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ರೋಗ ನಿರೋಧಕ ಶಕ್ತಿ
ಆದರೆ ಕೆಲ ವೈದ್ಯರು ಇದನ್ನು ವಿರೋಧಿಸಿದ್ದು, ದಾಸವಾಳಕ್ಕೆ ಈ ಗುಣಗಳಿವೆ ಎಂಬುದು ಸಾಬೀತಾಗಿಲ್ಲ. ಸಿನಿಮಾ ನಟಿಯರ ಈ ನಡುವಳಿಕೆಯನ್ನು ನಿಯಂತ್ರಿಸುವ ಕಾನೂನು ತರಬೇಕಿದೆ ಎಂದಿದ್ದಾರೆ.
ಛೀಮಾರಿ ಹಾಕಿದ ವೈದ್ಯರು
ವೈದ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ, ನಯನತಾರಾ ಅವರ ಪೋಸ್ಟ್ ವಿರುದ್ಧ ಹಲವರು ಕಮೆಂಟ್ ಮಾಡಿದ್ದು, ಪೋಸ್ಟ್ ಅನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ.
ನಯನತಾರಾಗೆ ಮುಜುಗರ
ಅದಿತಿ ರಾವ್ ಹೈದಿರಿಯ ಈ ಹಸಿರು ಬಣ್ಣದ ಸುಂದರ ಉಡುಗೆಯ ತೀರಾ ಹೆಚ್ಚೇನಲ್ಲ
ಇದನ್ನೂ ನೋಡಿ