07 June 2024

ಎನ್‌ಡಿಎ ಸಂಸದೀಯ ಸಭೆಯಲ್ಲಿ ಪ್ರತಿಧ್ವನಿಸಿದ "ಮೋದಿ... ಮೋದಿ...." ಘೋಷಣೆ

Author :Akshatha Vorkady

ಲೋಕಸಭೆಯ ನಾಯಕ

ಇಂದು(ಮೇ07) ಅಧಿಕೃತವಾಗಿ ಎನ್​ಡಿಎಯ ಎಲ್ಲಾ ಸಂಸದರು ಮೋದಿಯನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.

ಎನ್‌ಡಿಎ ಸಂಸದೀಯ ಸಭೆ

ಎನ್‌ಡಿಎ ಸಂಸದರು, ಮುಖ್ಯಮಂತ್ರಿಗಳು ಸೇರಿದಂತೆ ಮೈತ್ರಿಕೂಟದ ಹಿರಿಯ ನಾಯಕರು ಸಂಸದೀಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂವಿಧಾನಕ್ಕೆ ನಮಿಸಿದ ಮೋದಿ

ಎನ್‌ಡಿಎ ಸಂಸದೀಯ ಸಭೆಗೆ ಆಗಮಿಸುತ್ತಿದ್ದಂತೆ ಸಂವಿಧಾನ ಪುಸ್ತಕಕ್ಕೆ ನಮಸ್ಕರಿಸಿ ಗೌರವ ಸಮರ್ಪಿಸಿದ ನರೇಂದ್ರ ಮೋದಿ.

ನಾಯಕರುಗಳ ಶುಭಾಶಯ

ಎನ್‌ಡಿಎ ಸಂಸದೀಯ ಸಭೆಯಲ್ಲಿ ನರೇಂದ್ರ ಮೋದಿ ಅವರಿಗೆ  ಶುಭಾಶಯ ಕೋರಿದ ಪ್ರಮುಖ ನಾಯಕರುಗಳು. 

ಹೆಚ್​ಡಿ ಕುಮಾರಸ್ವಾಮಿ

"ಮೋದಿ, ಅಮಿತ್ ಶಾ ಸೇರಿ ಮೈತ್ರಿ ನಾಯಕರಿಗೆ ನನ್ನ ಧನ್ಯವಾದ, ಮುಂದಿನ ಅವಧಿಗೂ ಮೋದಿ ಸೇವೆ ಮುಂದುವರಿಯಲಿದೆ".

ಚಂದ್ರಬಾಬು ನಾಯ್ಡು

"ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ, ಮೋದಿ ಸರಿಯಾದ ಸಮಯಕ್ಕೆ ಸೂಕ್ತ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದುಐತಿಹಾಸಿಕ ದಿನ"

ನಿತೀಶ್​ ಕುಮಾರ್

"ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ ಅವರಿಗೆ ನಮ್ಮ ಬೆಂಬಲವಿದೆ. ಅಲ್ಲಿ ಇಲ್ಲಿ ವಿರೋಧ ಪಕ್ಷದವರು ಗೆದ್ದಿದ್ದಾರೆ ಮುಂದಿನ ಬಾರಿ ಎಲ್ಲರೂ ಸೋಲಲಿದ್ದಾರೆ"

ಏಕನಾಥ್ ಶಿಂಧೆ

 "ಹೆಮ್ಮೆಯ ನಾಯಕ ಶ್ರೀ ನರೇಂದ್ರ ಮೋದಿಯವರನ್ನು ಎನ್.ಡಿ.ಎ. ಮೈತ್ರಿಕೂಟದ ಸದಸ್ಯರು ಸ್ವಾಗತಿಸುವುದು ಐತಿಹಾಸಿಕ ಕ್ಷಣ. ನಮ್ಮ ಬೆಂಬಲ ಸದಾ ಅವರಿಗಿದೆ"

ಮೈತ್ರಿ ನಾಯಕರು

ಇದಲ್ಲದೇಮಹಾರಾಷ್ಟ್ರ ಸಿಎಂ ಶಿಂಧೆ, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್​​​, ಲೋಕ ಜನಶಕ್ತಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಸೇರಿ ಮೈತ್ರಿ ನಾಯಕರಿಂದ ಮೋದಿಗೆ ಶುಭಾಶಯ.