ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಟ್ಟಾದ ನಟಿ ನಿತ್ಯಾ ಮೆನನ್

27 Sep 2023

Pic credit - instagram

ನಟಿ ನಿತ್ಯಾ ಮೆನನ್ ಅವರು ಸಿಟ್ಟಾಗಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಅವರು ಕಿಡಿಕಾರಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ನಿತ್ಯಾ ಮೆನನ್

ನಿತ್ಯಾ ಮೆನನ್ ಇತ್ತೀಚೆಗೆ ಯಾರಿಗೂ ಸಂದರ್ಶನ ನೀಡಿಲ್ಲ. ಹಾಗಿದ್ದರೂ ಅವರು ಸಂದರ್ಶನ ನೀಡಿದ್ದಾರೆ ಎಂದು ನಕಲಿ ಸುದ್ದಿ ಹರಿಬಿಡಲಾಗಿದೆ.

ಸುಳ್ಳು ಸುದ್ದಿ

‘ತಮಿಳು ಚಿತ್ರರಂಗದಲ್ಲಿ ನನಗೆ ಕಷ್ಟವಾಯಿತು. ಅಲ್ಲಿನ ಹೀರೋ ನನಗೆ ಕಿರುಕುಳ ನೀಡುತ್ತಿದ್ದ’ ಎಂದು ನಿತ್ಯಾ ಹೇಳಿದ್ದಾಗಿ ವರದಿ ಆಯಿತು.

ಏನಿದು ಸುದ್ದಿ?

ನಿತ್ಯಾ ಹೀಗೆ ಹೇಳಿದ್ದು ಯಾರ ಬಗ್ಗೆ? ಅವರಿಗೆ ಕಿರುಕುಳ ನೀಡಿದ್ದ ಯಾರು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಆಗಿದೆ.

ಭರ್ಜರಿ ಚರ್ಚೆ

ನಿತ್ಯಾ ಮನನ್ ಅವರು ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದರು. ನಾನು ಆ ಹೇಳಿಕೆಯನ್ನೇ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ನಟಿಯ ಸ್ಪಷ್ಟನೆ

ಕ್ಲಿಕ್​ಗಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ನಿತ್ಯಾ ಮೆನನ್ ಅವರು ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಕೋರಿಕೆ

ನಿತ್ಯಾ ಮೆನನ್ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ನಿತ್ಯಾ ಅವರು ಫೇಮಸ್ ಆಗಿದ್ದಾರೆ.

ಕನ್ನಡದಲ್ಲೂ ನಟನೆ

ಕಪ್ಪುಡುಗೆಯಲ್ಲಿ ಗಮನ ಸೆಳೆದ ನಟಿ ತೇಜಸ್ವಿ ಪ್ರಕಾಶ್