ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗೆದ್ದ ದೇಶ ಯಾವುದು? ಭಾರತ ಗೆದ್ದಿರುವ ಚಿನ್ನದ ಪದಕಗಳೆಷ್ಟು?

22 July 2024

Pic credit: Google

ಪೃಥ್ವಿ ಶಂಕರ

Pic credit: Google

ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಒಟ್ಟು 206 ದೇಶಗಳು ಹೋರಾಟ ನಡೆಸಲಿವೆ.

Pic credit: Google

ಆದರೆ ಅದಕ್ಕೂ ಮುನ್ನ ನಾವು ಒಲಿಂಪಿಕ್ ಇತಿಹಾಸದಲ್ಲಿ ಯಾವ ಐದು ದೇಶಗಳು ಹೆಚ್ಚು ಚಿನ್ನ ಮತ್ತು ಪದಕಗಳನ್ನು ಗೆದ್ದಿವೆ ಎಂಬುದನ್ನು ಹೇಳಲಿದ್ದೇವೆ.

Pic credit: Google

ಒಲಂಪಿಕ್ ಕ್ರೀಡಾಕೂಟದಲ್ಲಿ ಗರಿಷ್ಠ 1065 ಚಿನ್ನದ ಪದಕಗಳನ್ನು ಗೆದ್ದ ದಾಖಲೆಯನ್ನು ಅಮೆರಿಕ ಹೊಂದಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ 1000 ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ಏಕೈಕ ದೇಶ ಅಮೆರಿಕ.

Pic credit: Google

ಅಷ್ಟೇ ಅಲ್ಲ, ಅಮೆರಿಕ ತನ್ನ ಖಾತೆಯಲ್ಲಿ 835 ಬೆಳ್ಳಿ ಮತ್ತು 738 ಕಂಚಿನ ಪದಕಗಳನ್ನು ಹೊಂದಿದೆ. ಅಮೆರಿಕ ಇದುವರೆಗೆ ಒಟ್ಟು 2638 ಚಿನ್ನದ ಪದಕಗಳನ್ನು ಗೆದ್ದಿದೆ.

Pic credit: Google

ಸೋವಿಯತ್ ಯೂನಿಯನ್ 395 ಚಿನ್ನ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ಈಗ ಸೋವಿಯತ್ ಒಕ್ಕೂಟವು ಒಡೆದು ಹಲವು ದೇಶಗಳಾಗಿ ರೂಪಾಂತರಗೊಂಡಿದೆಯಾದರೂ ಅದು 9 ಒಲಂಪಿಕ್ ಕ್ರೀಡಾಕೂಟಗಳಲ್ಲಿ ಒಟ್ಟು 1010 ಪದಕಗಳನ್ನು ಗೆದ್ದಿದೆ.

Pic credit: Google

ಗ್ರೇಟ್ ಬ್ರಿಟನ್ 285 ಚಿನ್ನದೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ದೇಶದ ಜನಸಂಖ್ಯೆ ಸುಮಾರು 7 ಕೋಟಿಯಾದರೂ ಈ ದೇಶ 918 ಒಲಿಂಪಿಕ್ ಪದಕಗಳನ್ನು ಗೆದ್ದಿದೆ.

Pic credit: Google

ಅಧಿಕ ಚಿನ್ನದ ಪದಕ ಗೆದ್ದ ದೇಶಗಳಲ್ಲಿ ವಿಚಾರದಲ್ಲಿ ಚೀನಾ ನಾಲ್ಕನೇ ಸ್ಥಾನದಲ್ಲಿದ್ದು, ಈ ದೇಶ 262 ಚಿನ್ನದ ಪದಕಗಳನ್ನು ಜಯಿಸಿದೆ.

Pic credit: Google

ಐದನೇ ಸ್ಥಾನದಲ್ಲಿರುವ ಫ್ರಾನ್ಸ್ ಇದುವರೆಗೆ 223 ಚಿನ್ನದ ಪದಕಗಳನ್ನು ಗೆದ್ದಿದೆ.

Pic credit: Google

ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ.. 140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತ ಇದುವರೆಗೆ ಕೇವಲ 10 ಚಿನ್ನದ ಪದಕಗಳನ್ನು ಮಾತ್ರ ಗೆದ್ದಿದೆ.