PKL Auction 2024: ಪ್ರೋ ಕಬಡ್ಡಿ ಲೀಗ್ ಹರಾಜಿನಲ್ಲಿ ಕೋಟಿಗೂ ಅಧಿಕ ಬೆಲೆ ಪಡೆದವರ ಪಟ್ಟಿ

17  August 2024

Pic credit: Google

ಪೃಥ್ವಿ ಶಂಕರ

Pic credit: Google

ಪ್ರೋ ಕಬಡ್ಡಿ ಲೀಗ್ ಸೀಸನ್-11 ರ ಹರಾಜಿನಲ್ಲಿ 1 ಕೋಟಿಗೂ ಅಧಿಕ ಮೊತ್ತ ಪಡೆದ ಸ್ಟಾರ್ ಪ್ಲೇಯರ್ಸ್​ಗಳ ಪಟ್ಟಿ ಇಲ್ಲಿದೆ.

Pic credit: Google

ಸಚಿನ್ ತನ್ವರ್ ಅವರನ್ನು ತಮಿಳ್ ತಲೈವಾಸ್ ಫ್ರಾಂಚೈಸಿ 2.15 ಕೋಟಿ ರೂ. ನೀಡಿ ಖರೀದಿಸಿತು. ಈ ಮೂಲಕ ಈ ಬಾರಿಯ ಹರಾಜಿನಲ್ಲಿ ಅಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆ ಸಚಿನ್ ಪಾಲಾಯಿತು.

Pic credit: Google

ಇನ್ನು ಅಧಿಕ ಮೊತ್ತ ಪಡೆದವರಲ್ಲಿ ಎರಡನೇ ಸ್ಥಾನದಲ್ಲಿರುವ ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆ ಅವರನ್ನು ಹರಿಯಾಣ ಸ್ಟೀಲರ್ಸ್, 2.07 ಕೋಟಿ ರೂ. ನೀಡಿ ಖರೀದಿಸಿತು.

Pic credit: Google

ಗುಮನ್ ಸಿಂಗ್ ಅವರನ್ನು  ಗುಜರಾತ್ ಜೈಂಟ್ಸ್ ಫ್ರಾಂಚೈಸ್ 1.97 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.

Pic credit: Google

ಪವನ್ ಸೆಹ್ರಾವತ್ ಅವರನ್ನು ತೆಲುಗು ಟೈಟಾನ್ಸ್ ಎಫ್‌ಬಿಎಂ ಕಾರ್ಡ್​ ಬಳಸಿ 1.725 ಕೋಟಿ ರೂ.ಗೆ ತನ್ನಲ್ಲಿಯೇ ಉಳಿಸಿಕೊಂಡಿತು.

Pic credit: Google

ಬೆಂಗಳೂರು ಬುಲ್ಸ್ ಮಾಜಿ ಆಟಗಾರ ಭರತ್ ಅವರನ್ನು ಯುಪಿ ಯೋಧಸ್,  1.30 ಕೋಟಿ ರೂ. ನೀಡಿ ಖರೀದಿಸಿತು.

Pic credit: Google

ಮಣಿಂದರ್ ಸಿಂಗ್ ಅವರನ್ನು  ಬೆಂಗಾಲ್ ವಾರಿಯರ್ಸ್  ಫ್ರಾಂಚೈಸಿ ಎಫ್‌ಬಿಎಂ ಕಾರ್ಡ್​ ಬಳಸಿ 1.15 ಕೋಟಿ ರೂ.ಗೆ ತನ್ನಲ್ಲಿಯೇ ಉಳಿಸಿಕೊಂಡಿತು.

Pic credit: Google

ಅಜಿಂಕ್ಯ ಅಶೋಕ್ ಪವಾರ್ ಅವರನ್ನು ನಮ್ಮ ಬೆಂಗಳೂರು ಬುಲ್ಸ್ ತಂಡ 1.107 ಕೋಟಿ ರೂ. ಗೆ ಖರೀದಿಸಿದೆ.

Pic credit: Google

ಸುನಿಲ್ ಕುಮಾರ್ ಅವರನ್ನು ಯು ಮುಂಬಾ ಫ್ರಾಂಚೈಸಿ 1.015 ಕೋಟಿ ರೂ. ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತು.