ಒಲಿಂಪಿಕ್ಸ್ ನಲ್ಲಿ ದುರವಸ್ಥೆ! ಚಿನ್ನ ಗೆದ್ದ ವೀರನಿಗೆ ಪಾರ್ಕ್ ನಲ್ಲಿ ಮಲಗಬೇಕಾದ ದುಸ್ಥಿತಿ

05  August 2024

Pic credit: Google

ಪೃಥ್ವಿ ಶಂಕರ

Pic credit: Google

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಧದಷ್ಟು ಪಯಣ ಮುಕ್ತಾಯಗೊಂಡಿದೆ. ಆದರೂ ಕ್ರೀಡಾ ಗ್ರಾಮದಲ್ಲಿ ಒಂದಿಲ್ಲೊಂದು ವಿವಾದಗಳು ಸೃಷ್ಟಿಯಾಗುತ್ತಲೇ ಇವೆ.

Pic credit: Google

ಹಿಜಾಬ್ ನಿಷೇಧದಿಂದ ಆರಂಭವಾದ ವಿವಾದಗಳ ಸಾಲಿಗೆ ಇದೀಗ ಹೊಸ ವಿವಾದವೊಂದು ಸೇರಿಕೊಂಡಿದೆ. ಒಲಿಂಪಿಕ್ಸ್ ಸಂಘಟಕರ ಅವ್ಯವಸ್ಥೆಯಿಂದಾಗಿ ಸ್ಪರ್ಧಿಗಳು ಪಾರ್ಕಿನಲ್ಲಿ ಮಲಗಿ ವಿಶ್ರಮಿಸಬೇಕಿದೆ.

Pic credit: Google

ವಾಸ್ತವವಾಗಿ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ವಿಲೇಜ್‌ನ ಕೊಠಡಿಗಳಲ್ಲಿ ಎಸಿ ಇಲ್ಲ. ಇದರಿಂದಾಗಿ ಆಟಗಾರರು ವೀಪರಿತ ಸೆಕೆಯಿಂದಾಗಿ ತೊಂದರೆಗೀಡಾಗಿದ್ದಾರೆ.

Pic credit: Google

ಈ ಸೆಕೆ ತಡೆಯಲಾಗದೆ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಇಟಾಲಿಯನ್ ಈಜುಗಾರ ಥಾಮಸ್ ಚಾಕೋನ್ ಪ್ಯಾರಿಸ್‌ನ ಉದ್ಯಾನವನದಲ್ಲಿ ನೆಲದ ಮೇಲೆ ಮಲಗಿ ಧಣಿವಾರಿಸಿಕೊಂಡಿದ್ದಾರೆ.

Pic credit: Google

ಚೆಕಾನ್ ಅವರು ಪ್ಯಾರಿಸ್​ನ ಪಾರ್ಕ್​ವೊಂದರಲ್ಲಿ ಒಂದು ಟವಲ್ ಹಾಸಿಕೊಂಡು ನಿದ್ರಿಸುತ್ತಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Pic credit: Google

ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ವಿಲೇಜ್‌ನಲ್ಲಿ ಆಟಗಾರರಿಗಾಗಿ ಮಾಡಿದ ವ್ಯವಸ್ಥೆಗಳ ಬಗ್ಗೆ ಚೆಕಾನ್ ಇತ್ತೀಚೆಗೆ ಪ್ರಶ್ನೆಗಳನ್ನು ಎತ್ತಿದ್ದರು. ಸೆಖೆ ಮತ್ತು ಗದ್ದಲದಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದರು.

Pic credit: Google

ಗೇಮ್ಸ್ ವಿಲೇಜ್​ನ ಕೊಠಡಿಗಳಲ್ಲಿ ಎಸಿ ಇಲ್ಲದ ಕಾರಣ ಭಾರತದ ಆಟಗಾರರೂ ಕಂಗಾಲಾಗಿದ್ದರು. ಹೀಗಾಗಿ ಭಾರತ ಸರ್ಕಾರವು ಅವರಿಗೆ 40 ಪೋರ್ಟಬಲ್ ಎಸಿಗಳನ್ನು ಕಳುಹಿಸಿಕೊಟ್ಟಿದೆ.