2023ರ ಏಷ್ಯಾಕಪ್​ಗೆ ಅದ್ಧೂರಿ ತೆರೆಬಿದ್ದಿದ್ದು, ಭಾರತ 8ನೇ ಬಾರಿಗೆ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮದೆ.

18 September 2023

ಈ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಭಾರತಕ್ಕೆ 1.25 ಕೋಟಿ ರೂ. ಬಹುಮಾನ ಸಿಕ್ಕಿದೆ.

18 September 2023

ಹಾಗೆಯೇ ರನ್ನರ್ ಅಪ್ ಶ್ರೀಲಂಕಾ ತಂಡಕ್ಕೆ 62 ಲಕ್ಷ ರೂ. ಬಹುಮಾನ ಸಿಕ್ಕಿದೆ.

18 September 2023

ಇನ್ನು ಈ ಪಂದ್ಯಾವಳಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನಕ್ಕೆ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಲು ಸಾಧ್ಯವಾಗಲಿಲ್ಲ.

18 September 2023

ಅದೂ ಸಾಲದೆಂಬಂತೆ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.

18 September 2023

ಹೀಗಾಗಿ ನಾಲ್ಕನೇ ಸ್ಥಾನ ಪಡೆದ ಪಾಕಿಸ್ತಾನ ತಂಡಕ್ಕೆ 25 ಲಕ್ಷ ರೂ. ಬಹುಮಾನ ಸಿಕ್ಕಿದೆ.

18 September 2023

ವಿಚಿತ್ರವೆಂದರೆ ಪಂದ್ಯವಾಳಿ ಸುಗಮವಾಗಿ ನಡೆಯಲು ಸಾಕಷ್ಟು ಶ್ರಮವಹಿಸಿದ ಶ್ರೀಲಂಕಾದ ಮೈದಾನದ ಸಿಬ್ಬಂದಿಯೇ ಪಾಕಿಸ್ತಾನಕ್ಕಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ.

18 September 2023

ಪಾಕ್ ತಂಡಕ್ಕೆ 25 ಲಕ್ಷ ರೂ. ಸಂಭಾವನೆ ಸಿಕ್ಕರೆ, ಗ್ರೌಂಡ್ ಸ್ಟಾಫ್​ಗೆ 41 ಲಕ್ಷ ರೂ. ಬಹುಮಾನ ಸಿಕ್ಕಿದೆ.

18 September 2023

ಇದಲ್ಲದೆ ಮೊಹಮ್ಮದ್ ಸಿರಾಜ್ ಕೂಡ ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯ 4.5 ಲಕ್ಷ ರೂ. ಬಹುಮಾನದ ಮೊತ್ತವನ್ನು ಗ್ರೌಂಡ್ ಸ್ಟಾಫ್​ಗೆ ನೀಡಿದರು.

18 September 2023