01-12-2023
ಮಾಗಡಿ: ಪರಿಹಾರ ಕೇಳಿದ ರೈತನ ಬಳಿ ಡಿಕೆ ಸುರೇಶ್ ದರ್ಪ
Author: ಗಣಪತಿ ಶರ್ಮ
ರೈತರೊಬ್ಬರ ಬಳಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸಿಟ್ಟಾದ ಘಟನೆ ಮಾಗಡಿಯಲ್ಲಿ ಶುಕ್ರವಾರ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಡಿಕೆ ಸುರೇಶ್ ಭಾಷಣ ಮಾಡುತ್ತಿದ್ದರು.
ಭಾಷಣದ ಮಧ್ಯೆ ರೈತರೊಬ್ಬರು ಬರ ಪರಿಹಾರ ನೀಡುವಂತೆ ಕೇಳಿದ್ದಾರೆ.
ಒಂದು ಎಕರೆಗೆ ಹತ್ತು ಸಾವಿರ ರೂಪಾಯಿ ಬರ ಪರಿಹಾರ ನೀಡುವಂತೆ ರೈತ ಕೇಳಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿ ಬೆಳೆ ಪರಿಹಾರ ಕೊಡಿಸುವಂತೆ ರೈತ ಕೇಳಿದ್ದಾರೆ.
ಪದೇ ಪದೇ ರೈತ ಭಾಷಣಕ್ಕೆ ಅಡ್ಡಿಪಡಿಸಿ ಪರಿಹಾರ ಕೇಳಿದ್ದರಿಂದ ಡಿಕೆ ಸುರೇಶ್ ಸಿಟ್ಟಾದರು.
ಪ್ರಧಾನ ಮಂತ್ರಿ ಬಳಿ ಪರಿಹಾರ ಕೇಳು ಎಂದು ರೈತನ ಬಳಿ ಸಿಟ್ಟಿನಿಂದ ಡಿಕೆ ಸುರೇಶ್ ಹೇಳಿದ್ದಾರೆ.
ಈ ಹಿಂದೆಯೂ ಕೆಲವು ಬಾರಿ ಡಿಕೆ ಸುರೇಶ್ ಅವರು ಉದ್ಧಟತನದ ವರ್ತನೆಯಿಂದ ಸುದ್ದಿಯಾಗಿದ್ದರು.
NEXT - ಕಾಂಗ್ರೆಸ್ ವಿರುದ್ಧ ಮೈಸೂರಿನಲ್ಲಿ ಸಿಟಿ ರವಿ ವಾಗ್ದಾಳಿ