ಸೀರೆಯುಟ್ಟು ಮಿಂಚಿದ ಬಾಲಿವುಡ್ ನಟಿ ಆಲಿಯಾ ಭಟ್

ಆಲಿಯಾ ಭಟ್​​​ ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 

ಆಲಿಯಾ ಭಟ್ ಹಾಗೂ ರಣ್‌ವೀರ್ ಸಿಂಗ್ ಅಭಿನಯಿಸಿರುವ ಹೊಸ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

ಸಿನಿಮಾದ ಪ್ರಚಾರದಲ್ಲಿ ನಟಿ ಆಲಿಯಾ ಭಟ್​​​ ಕಾಣಿಸಿಕೊಂಡಿದ್ದು ಹೀಗೆ.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಜುಲೈ 28ರಂದು ತೆರೆಗೆ ಬರಲು ಸಿದ್ದವಾಗಿದೆ. 

ಸೋಮವಾರ ವಡೋದರಾದಲ್ಲಿ ನಡೆದ ಪ್ರಮೋಷನ್​​ ಕಾರ್ಯಕ್ರಮದಲ್ಲಿ ಆಲಿಯಾ ಮಿಂಚಿದ್ದು ಹೀಗೆ. 

ಸ್ವತಃ ಫೋಟೋಗಳನ್ನು ಸೋಶಿಯಲ್​​​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಆಲಿಯಾ. 

ಸೀರೆಯುಟ್ಟು, ಬಿಂದಿ ಹಾಗೂ ಜುಮ್ಕಾದಲ್ಲಿ  ಲಕ್ಷಣವಾಗಿ ಕಾಣಿಸಿಕೊಂಡಿರುವ ಆಲಿಯಾ. 

ಸಾಕಷ್ಟು ನೆಟ್ಟಿಗರು ನಟಿಯ ಅಂದಕ್ಕೆ ಬಾರ್ಬಿ ಡಾಲ್​​ ಎಂದು ಕಾಮೆಂಟ್​​​ ಮಾಡಿದ್ದಾರೆ.