ಒಂದೇ ಪಂದ್ಯದಲ್ಲಿ 2 ದಾಖಲೆ ನಿರ್ಮಿಸಲು ಸಜ್ಜಾದ ಜಡೇಜಾ

10 September 2023

Pic credit - Google

ಇಂದು ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಆಗುತ್ತಿದೆ. ಇದರಲ್ಲಿ ರವೀಂದ್ರ ಜಡೇಜಾ ಎರಡು ದಾಖಲೆ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ.

ದಾಖಲೆಯತ್ತ ಜಡೇಜಾ

Pic credit - Google

ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ತೋರಿರುವ ಜಡೇಜಾ ಈವರೆಗೆ 22 ವಿಕೆಟ್ ಪಡೆದಿರುವ ಸಾಧನೆ ಮಾಡಿದ್ದಾರೆ.

22 ವಿಕೆಟ್

Pic credit - Google

ಜಡೇಜಾ 22 ವಿಕೆಟ್ ಕಿತ್ತು ಇರ್ಫಾನ್ ಪಠಾಣ್ ಅರೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ. ಇಂದು 1 ವಿಕೆಟ್ ಪಡೆದರೆ ಪಠಾಣ್ ದಾಖಲೆ ಉಡೀಸ್ ಮಾಡಲಿದ್ದಾರೆ.

ಪಠಾಣ್ ದಾಖಲೆ ಉಡೀಸ್

Pic credit - Google

ಜಡೇಜಾ ಒಂದು ವಿಕೆಟ್ ಪಡೆದುಕೊಂಡರೆ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ.

ಭಾರತದ ಮೊದಲ ಬೌಲರ್

Pic credit - Google

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ರವೀಂದ್ರ ಜಡೇಜಾ 200 ವಿಕೆಟ್ ಪೂರೈಸಲು ಕೇವಲ 3 ವಿಕೆಟ್ ಅಗತ್ಯವಿದೆ. ಇಂದು 3 ವಿಕೆಟ್ ಕಿತ್ತರೆ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ.

200 ವಿಕೆಟ್

Pic credit - Google

ಜಡೇಜಾ ಅವರು ನುವಾನ್ ಕುಲಶೇಖರ ಹಾಗೂ ಬ್ರಾವೋ ಅವರ ದಾಖಲೆ ಮುರಿಯುವ ಜೊತೆಗೆ 200 ವಿಕೆಟ್ ಪೂರೈಸಿದ ಭಾರತದ 7ನೇ ಬೌಲರ್ ಎಂಬ ದಾಖಲೆ ಬರೆಯಲಿದ್ದಾರೆ.

ಭಾರತದ 7ನೇ ಬೌಲರ್

Pic credit - Google

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲ್ಲಿದೆ. ಟಾಸ್ ಪ್ರಕ್ರಿಯೆ 2.30ಕ್ಕೆ ನಡೆಯಲಿದೆ.

3ಗಂಟೆಗೆ ಪಂದ್ಯ

Pic credit - Google

ಸಚಿನ್ ತೆಂಡೂಲ್ಕರ್ ದಾಖಲೆ ಪುಡಿಗಟ್ಟಿದ ಡೇವಿಡ್ ವಾರ್ನರ್

Pic credit - Google