28-09-2023
1 ಗಂಟೆಯಲ್ಲಿ 4 ಲಕ್ಷಕ್ಕೂ ಅಧಿಕ ಮಾರಾಟವಾಯಿತು ಈ ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 13
ರೆಡ್ಮಿ ನೋಟ್ 13 ಸರಣಿಯ ಸ್ಮಾರ್ಟ್‌ಫೋನ್‌ಗಳು ಮೊದಲ ಸೇಲ್ ಸಮಯದಲ್ಲಿ ವಿನೂತನ ದಾಖಲೆ ಬರೆದಿವೆ.
ದಾಖಲೆಯ ಮಾರಾಟ
ಶವೋಮಿ ಕಂಪನಿಯ ರೆಡ್ಮಿ ನೋಟ್ 13 ಸರಣಿಯನ್ನು ಕಳೆದ ವಾರ ಲಾಂಚ್ ಮಾಡಲಾಗಿತ್ತು, ಸೆ. 26 ಕ್ಕೆ ಚೀನಾದಲ್ಲಿ ಮಾರಾಟಕ್ಕೆ ಲಭ್ಯವಾಗಿಸಿ ದಾಖಲೆ ನಿರ್ಮಿಸಿದೆ.
410,000 ಮಾರಾಟ
ವರದಿ ಪ್ರಕಾರ, ರೆಡ್ಮಿ ನೋಟ್ 13 ಸರಣಿ ಸೇಲ್ ಆರಂಭವಾದ ಒಂದೇ ಗಂಟೆಯಲ್ಲಿ 410,000 ಯುನಿಟ್‌ಗಳಿಗಿಂತ ಹೆಚ್ಚು ಫೋನ್‌ಗಳು ಸೇಲ್ ಆಗಿವೆಯಂತೆ.
ಒಟ್ಟು 3 ಫೋನ್
ರೆಡ್ಮಿ ನೋಟ್ 13 ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನುಗಳಿಗೆ. ಇವು ನೋಟ್ 13, ನೋಟ್ 13 ಪ್ರೊ ಮತ್ತು ನೋಟ್ 13 ಪ್ರೊ+ ಆಗಿದೆ.
200MP ಕ್ಯಾಮೆರಾ
ರೆಡ್ಮಿ ನೋಟ್ 13 ಪ್ರೊ ಸರಣಿಯ ಫೋನುಗಳು ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾ ಮೆರಾ ಆಯ್ಕೆಯನ್ನು ಹೊಂದಿದೆ.
120W ಚಾರ್ಜರ್
ಪ್ರೊ ಮಾದರಿಯು 67W ವೇಗದ ಚಾರ್ಜಿಂಗ್‌ನೊಂದಿಗೆ 5100mAh ಬ್ಯಾಟರಿ ಹೊಂದಿದೆ. ಪ್ರೊ+ 120W ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಹೊಂದಿದೆ.
ಭಾರತದಲ್ಲಿ ಯಾವಾಗ?
ರೆಡ್ಮಿ ನೋಟ್ 13, ನೋಟ್ 13 ಪ್ರೊ ಮತ್ತು ನೋಟ್ 13 ಪ್ರೊ+ ಫೋನುಗಳು ಕೆಲವೇ ತಿಂಗಳುಗಳಲ್ಲಿ ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ.
ಗೂಗಲ್ ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಫೀಚರ್ಸ್ ಸೋರಿಕೆ
ಇನ್ನಷ್ಟು ಓದಿ