ಶಾರುಖ್ ಖಾನ್ ಮಗಳು ಸುಹಾನಾ ತಲೆ ಕೂದಲಿಗೆ ಧರಿಸಿರುವ ಕ್ಲಿಪ್ಪಿನ ಬೆಲೆ ಎಷ್ಟು ಸಾವಿರ ಗೊತ್ತೆ?
229 July 2024
Manjunatha
ಶಾರುಖ್ ಖಾನ್, ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು, ಅವರಷ್ಟು ದುಬಾರಿ ಸಂಭಾವನೆ ಪಡೆವ ನಟ ಭಾರತದಲ್ಲಿ ಯಾರೂ ಇಲ್ಲ.
ದುಬಾರಿ ನಟ ಶಾರುಖ್
ಶಾರುಖ್ ಖಾನ್ ಮಕ್ಕಳು, ತಂದೆಯ ಹಣದಲ್ಲಿ ಸಖತ್ ಮೋಜು ಮಾಡುತ್ತಾರೆ. ಅದರಲ್ಲಿಯೂ ಪುತ್ರಿ ಸುಹಾನಾ ಅಂತೂ ಫ್ಯಾಷನ್ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿದ್ದಾರೆ.
ಶಾರುಖ್ ಮಕ್ಕಳ ಮೋಜು
ವಿದೇಶದ ಅತ್ಯಂತ ದುಬಾರಿ ಬ್ರ್ಯಾಂಡ್ನ ಬಟ್ಟೆ ಮತ್ತು ಇತರೆ ಆಕ್ಸೆಸರಿಗಳನ್ನಷ್ಟೆ ಸುಹಾನಾ ಖಾನ್ ಧರಿಸುತ್ತಾರೆ ಮತ್ತು ಬಳಸುತ್ತಾರೆ.
ದುಬಾರಿ ಬ್ರ್ಯಾಂಡ್ನ ಬಟ್ಟೆ
ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಸುಹಾನಾ ಖಾನ್ ತಲೆ ಕೂದಲು ಕಟ್ಟಲು ಬಳಸಿದ್ದ ಕ್ಲಿಪ್ ಗಮನ ಸೆಳೆಯಿತು.
ಸುಹಾನಾ ಖಾನ್ ಕೂದಲು
ಸುಹಾನಾ ತಲೆ ಕೂದಲು ಕಟ್ಟಲು ಬಳಸಿದ್ದ ಸಣ್ಣ ಕ್ಲಿಪ್ನ ಬೆಲೆ 48,561 ರೂಪಾಯಿಗಳು. ಪ್ರಾಡಾ ಬ್ರ್ಯಾಂಡ್ನ ಹೇರ್ ಕ್ಲಿಪ್ ಇದು. ಹಾಗಾಗಿ ದುಬಾರಿ.
ಹೇರ್ಕ್ಲಿಪ್ನ ಬೆಲೆ ಎಷ್ಟು?
ಐದು ಅಥವಾ ಹತ್ತು ರೂಪಾಯಿಗೆ ಸಿಗುವ ಕ್ಲಿಪ್ಗೆ ಅರ್ಧ ಲಕ್ಷ ರೂಪಾಯಿ ಹಣ ಕೊಟ್ಟಿದ್ದಾರೆ ಸುಹಾನ. ಅಪ್ಪನ ಹಣವನ್ನು ಚೆನ್ನಾಗಿ ಪೋಲು ಮಾಡುತ್ತಿದ್ದೀಯ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಅರ್ಧ ಲಕ್ಷ ರೂಪಾಯಿ
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಈಗ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸಿದ್ದು, ಮತ್ತೊಂದು ಸಿನಿಮಾ ಅವಕಾಶ ಅರಸಿ ಬಂದಿದೆ.
ಶಾರುಖ್ ಪುತ್ರಿ ಸುಹಾನಾ
ದಾಸವಾಳ ಚಹಾದ ಬಗ್ಗೆ ಪೋಸ್ಟ್ ಹಂಚಿಕೊಂಡು ಮುಜುಗರಕ್ಕೀಡಾದ ನಯನತಾರಾ