25-09-2023
3ನೇ ಏಕದಿನದಿಂದ ಗಿಲ್ ಔಟ್: 5 ಹೊಸ ಆಟಗಾರರು ಸೇರ್ಪಡೆ
ತೃತೀಯ ಏಕದಿನ
ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯ ಸೆ. 27 ರಂದು ರಾಜ್ಕೋಟ್'ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಗಿಲ್-ಶಾರ್ದೂಲ್ ಔಟ್
ಮೂರನೇ ಏಕದಿನ ಪಂದ್ಯದಿಂದ ಶುಭ್ಮನ್ ಗಿಲ್ ಹಾಗೂ ಶಾರ್ದೂಲ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರು ರಾಜ್ಕೋಟ್ಗೆ ಪ್ರಯಾಣಿಸಿಲ್ಲ.
ತೃತೀಯ ಏಕದಿನ
ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದ ಪರ ಪ್ರಥಮ ಮತ್ತು ದ್ವಿತೀಯ ಏಕದಿನ ಪಂದ್ಯ ಆಡದ ಐದು ಆಟಗಾರರು ಸೇರ್ಪಡೆಯಾಗಲಿದ್ದಾರೆ.
ಕೊಹ್ಲಿ-ರೋಹಿತ್
ವಿಶ್ರಾಂತಿಯಲ್ಲಿದ್ದ ರೋಹಿತ್, ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಮತ್ತು ಜಸ್ಪ್ರಿತ್ ಬುಮ್ರಾ ಇಂದು ಭಾರತ ತಂಡ ಸೇರಿಕೊಳ್ಳಲಿದ್ದಾರೆ.
ರೋಹಿತ್ ನಾಯಕ
ಮೊದಲೆರಡು ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ರಾಹುಲ್ ಈ ಪಟ್ಟದಿಂದ ಕೆಳಗಿಳಿಯಲಿದ್ದಾರೆ. ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ನಾಯಕತ್ವಕ್ಕೆ ಮರಳುತ್ತಾರೆ.
ಕೊನೆಯ ಪಂದ್ಯ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಐಸಿಸಿ ಏಕದಿನ ವಿಶ್ವಕಪ್ಗು ಮುನ್ನ ನಡೆಯಲಿರುವ ಕೊನೆಯ ಪಂದ್ಯ ಆಗಿದೆ.
ಎಷ್ಟು ಗಂಟೆಗೆ?
ಭಾರತ-ಆಸೀಸ್ ಮೂರನೇ ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಪಂದ್ಯದ ಟಾಸ್ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.
ಒಂದು ಶತಕ-ಹಲವು ದಾಖಲೆ: ಮುಂದುವರೆದ ಗಿಲ್ ಆರ್ಭಟ
ಇನ್ನಷ್ಟು ಓದಿ