ಭಾರತದ ಭವಿಷ್ಯದ ನಾಯಕ ಶುಭ್​ಮನ್ ಗಿಲ್​ಗೆ ಜನ್ಮದಿನದ ಸಂಭ್ರಮ

08-09-2023

ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕ ಎಂದೇ ಹೇಳಲಾಗುವ ಯುವ ಬ್ಯಾಟರ್ ಶುಭ್ ಮನ್ ಗಿಲ್ ಇಂದು 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

24ನೇ ವರ್ಷ

ಗಿಲ್ ಸದ್ಯ ಭಾರತ ಪರ ಏಷ್ಯಾಕಪ್ ನಲ್ಲಿ ಆಡುತ್ತಿದ್ದು, ಕೊಲಂಬೊದಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲಿಯೇ ಗಿಲ್ ಹುಟ್ಟುಹಬ್ಬ ಆಚರಿಸಿದ್ದಾರೆ. 

ಕೊಲಂಬೊದಲ್ಲಿ ಆಚರಣೆ

ಮಳೆ ಬರಲಿ ಬಿಡಲಿ ಭಾರತ- ಪಾಕ್ ಪಂದ್ಯ ನಡೆಯುವುದು ಡೌಟ್..!

ಶುಭ್​ಮನ್ ಗಿಲ್ ಅವರು 1999, ಸೆಪ್ಟೆಂಬರ್ 8 ರಂದು ಪಂಜಾಬ್​ನ ಫಝಿಕಾ ನಗರದಲ್ಲಿ ಜನಿಸಿದರು.

1999 ರಲ್ಲಿ ಜನನ

ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಗಿಲ್ ಹ್ಯಾಮಿಲ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಜನವರಿ 31, 2019 ರಂದು ಭಾರತೀಯ ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು.

2019 ರಲ್ಲಿ ಪದಾರ್ಪಣೆ

ಏಕದಿನ ಬಳಿಕ 2020 ರಲ್ಲಿ ಗಿಲ್ ಟೆಸ್ಟ್​ಗೂ ಪದಾರ್ಪಣೆ ಮಾಡಿದರು. ಟಿ20 ಲೋಕಕ್ಕೂ ಕಾಲಿಟ್ಟ ಇವರು ಈಗ ಭಾರತದ ಸ್ಟಾರ್ ಬ್ಯಾಟರ್ ಆಗಿದ್ದಾರೆ.

2020ರಲ್ಲಿ ಟೆಸ್ಟ್ ಪದಾರ್ಪಣೆ

ಗಿಲ್ ತಂದೆ ಲಕ್ವಿಂದರ್ ಗಿಲ್ ಕೂಡ ಕ್ರಿಕೆಟಿಗರಾಗಲು ಬಯಸಿದ್ದರು. ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ತಮ್ಮ ಮಗನನ್ನು ಕ್ರಿಕೆಟರ್ ಆಗಿಸಬೇಕೆಂದು ಪಣತೊಟ್ಟು ತಮ್ಮ ಕನಸು ನನಸು ಮಾಡಿದರು.

ತಂದೆಯ ಕನಸು ನನಸು

ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್​ನ ಭಾರತ ತಂಡದಲ್ಲಿ ಗಿಲ್ ಸ್ಥಾನ ಪಡೆದುಕೊಂಡಿದ್ದು, ಇವರ ಮೇಲೆ ಎಲ್ಲರ ಕಣ್ಣಿದೆ.

ವಿಶ್ವಕಪ್​ಗೆ ಗಿಲ್ ಆಯ್ಕೆ