26-09-2023
ನಂ. 1 ಬ್ಯಾಟರ್: ಗಿಲ್ಗೆ ಬಾಬರ್ ಸ್ಥಾನ ಕಿತ್ತುಕೊಳ್ಳುವ ಚಾನ್ಸ್ ಮಿಸ್
ಮೂರನೇ ಏಕದಿನ
ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ರಾಜ್ಕೋಟ್'ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಗಿಲ್ಗೆ ವಿಶ್ರಾಂತಿ
ಸತತವಾಗಿ ಕ್ರಿಕೆಟ್ ಆಡುತ್ತಿರುವ ಶುಭ್ಮನ್ ಗಿಲ್ಗೆ ವಿಶ್ವಕಪ್ಗು ಮುನ್ನ ತಾಜಾವಾಗಿರಲು ಮೂರನೇ ಏಕದಿನದಿಂದ ವಿಶ್ರಾಂತಿ ನೀಡಲಾಗಿದೆ.
ಕೈತಪ್ಪಿದ ದಾಖಲೆ
3ನೇ ಏಕದಿನ ಪಂದ್ಯದಲ್ಲಿ ಗಿಲ್ ಆಡಿದರೆ ನೂತನ ದಾಖಲೆ ಸೃಷ್ಟಿಸುವ ಅವಕಾಶವಿತ್ತು. ಏಕದಿನ ರ್ಯಾಂಕಿಂಗ್ನಲ್ಲಿ ನಂ. 1 ಪಟ್ಟಕ್ಕೇರಬಹುದಿತ್ತು.
ಬಾಬರ್ ಆಝಂ
ಪ್ರಸ್ತುತ ಪಾಕ್ ತಂಡದ ನಾಯಕ ಬಾಬರ್ ಆಝಂ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 857 ರೇಟಿಂಗ್ ಅಂಕಗಳೊಂದಿಗೆ ನಂ. 1 ಬ್ಯಾಟರ್ ಎನಿಸಿಕೊಂಡಿದ್ದಾರೆ.
ಗಿಲ್ 2ನೇ ಸ್ಥಾನ
ಶುಭ್ಮನ್ ಗಿಲ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 814 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, 2ನೇ ಸ್ಥಾನ ಪಡೆದಿದ್ದಾರೆ.
22 ರನ್
ಗಿಲ್ 22 ರನ್ ಕಲೆಹಾಕಿದರೆ ಏಕದಿನ ಮಾದರಿಯಲ್ಲಿ ನಂಬರ್ 1 ಪಟ್ಟವನ್ನು ಬಾಬರ್ ಅವರಿಂದ ಕಿತ್ತುಕೊಳ್ಳುತ್ತಿದ್ದರು. ಆದರೆ 3ನೇ ಪಂದ್ಯದಲ್ಲಿ ಇವರು ಆಡುತ್ತಿಲ್ಲ.
ಏಕದಿನ ವಿಶ್ವಕಪ್
ಭಾರತ ಏಕದಿನ ವಿಶ್ವಕಪ್ನಲ್ಲಿ ಅ. 8 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಇಲ್ಲಿ ಗಿಲ್ ಏಕದಿನ ಕ್ರಿಕೆಟಿನ ನಂ. 1 ಬ್ಯಾಟರ್ ಆಗುವ ಅವಕಾಶ ಹೊಂದಿದ್ದಾರೆ.
IND vs AUS: 3ನೇ ಏಕದಿನದಿಂದ ಭಾರತದ 7 ಆಟಗಾರರು ಔಟ್
ಇನ್ನಷ್ಟು ಓದಿ