ಚಿನ್ನದ ಸೀರೆಯಲ್ಲಿ ಕಂಗೊಳಿಸಿದ ಜಗನ್ಮಾತೆ ಹೊಂಬುಜ ಶ್ರೀ ಪದ್ಮಾವತಿ ದೇವಿ 

02-12-2023

Author: Ayesha

ಆಂಧ್ರಪ್ರದೇಶದ ಜಗನ್ನಾಯಕಪುರದಲ್ಲಿರುವ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿಗೆ ಭಕ್ತರು ಚಿನ್ನದ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಆದೇ ರೀತಿ ಘಟನೆ ಕರ್ನಾಟಕದಲ್ಲಿ ನಡೆದಿದೆ.

 ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೊಂಬುಜ ಕ್ಷೇತ್ರದಲ್ಲಿ ಅಪರೂಪದ ಘಟನೆ ನಡೆದಿದೆ.

ತಾಯಿಗೆ ಚಿನ್ನದ ಸೀರೆ

ರಿಪ್ಪನ್‌ಪೇಟೆ ಶ್ರೀಕ್ಷೇತ್ರ ಹೊಂಬುಜ ಜಗನ್ಮಾತೆ ಶ್ರೀ ಪದ್ಮಾವತಿ ತಾಯಿಗೆ ಭಕ್ತರು ಚಿನ್ನದ ಸೀರೆ ಸಮರ್ಪಿಸಿದ್ದಾರೆ.

ಜಗನ್ಮಾತೆ ಶ್ರೀ ಪದ್ಮಾವತಿ

ಜಗನ್ಮಾತೆ ಹೊಂಬುಜ ಶ್ರೀ ಪದ್ಮಾವತಿ ದೇವಿ ಚಿನ್ನದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಚಿನ್ನದ ಸೀರೆ ತೊಟ್ಟ ತಾಯಿಯನ್ನು ಕಣ್ತುಂಬಿಕೊಂಡ ಭಕ್ತರು ಧನ್ಯರಾಗಿದ್ದಾರೆ.

ಭಕ್ತರು ಧನ್ಯ

ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ, ಮಹಾಸ್ವಾಮೀಜಿಗಳವರ ಸಾನಿಧ್ಯದಲ್ಲಿ ಭಕ್ತರು ಚಿನ್ನದ ಸೀರೆ ಸಮರ್ಪಿಸಿದರು.

ತಾಯಿಗೆ ಚಿನ್ನದ ಸೀರೆ

ಭಕ್ತರು ಶ್ರೀ ಪದ್ಮಾವತಿ ಮಾತಾಕೀ ಜೈ ಎಂಬ ಹರ್ಷೋದ್ಘಾರದಿಂದ ತಾಯಿಯನ್ನು ವಿಶೇಷ ಸೀರೆಯಲ್ಲಿ ಕಂಡು ಪುನೀತರಾದರು.

ಭಕ್ತರು ಪುನೀತ

ವಿಶಿಷ್ಟ ವಿನ್ಯಾಸದ ಚಿನ್ನದ ಸೀರೆಯನ್ನು ಯಕ್ಷಿ ಶ್ರೀ ಪದ್ಮಾವತಿ ದೇವಿಗೆ ಭಕ್ತರು ಸಮರ್ಪಿಸಿದ್ದಾರೆ.

ವಿಶಿಷ್ಟ ವಿನ್ಯಾಸ

ಸೀರೆ ಸಮರ್ಪಣೆ ಬಳಿಕ ಪೂಜ್ಯ ಶ್ರೀಗಳವರಿಂದ ಭಕ್ತರು ಗೌರವ ಆಶೀರ್ವಾದ ಪಡೆದರು.

ಶ್ರೀಗಳ ಆಶೀರ್ವಾದ