ಬೇಡಿದ್ದನ್ನೆಲ್ಲ ಕೊಡುವ ಕಪ್ಪೆ ದೇವಾಲಯವಿರುವುದು ಎಲ್ಲಿ ಗೊತ್ತಾ?

02 JULY 2024

Pic credit - pinterest

Author Name: Sayinanda

ಭಾರತದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯಗಳ ಬಗ್ಗೆ ಕೇಳಿರಬಹುದು. ಆದರೆ ಇಲ್ಲೊಂದು ಕಡೆ ವಿಚಿತ್ರವೆನಿಸುವ ಕಪ್ಪೆ ದೇವಾಲಯವಿದೆ.

ಇತಿಹಾಸ ಪ್ರಸಿದ್ಧ ದೇವಾಲಯ

ಈ ಕಪ್ಪೆ ದೇವಾಲಯವು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಓಲ್ ಪಟ್ಟಣದಲ್ಲಿದೆ.

 ಉತ್ತರ ಪ್ರದೇಶ

200 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ದೇವರು ಮಹಾ ಶಿವ. ಆದರೆ ಕಪ್ಪೆಯ ಬೆನ್ನಿನ ಮೇಲೆ ಸುಂದರವಾಗಿ ನಿರ್ಮಾಣ ಮಾಡಲಾಗಿದೆ.

ದೇವಾಲಯದಲ್ಲಿಮಹಾ ಶಿವ

ಸ್ಥಳೀಯರು ಈ ದೇವಾಲಯವನ್ನು 'ಮಂಡೂಕ ಮಂದಿರ' ಎಂದೂ ಕರೆಯುತ್ತಾರೆ.

ಮಂಡೂಕ ಮಂದಿರ

ದಾರಿದ್ರ್ಯ ನಿವಾರಣೆ, ಬಡತನ ಮುಕ್ತಿ ಹಾಗೂ ಸಂತಾನ ಭಾಗ್ಯ ಹೀಗೆ ವರವನ್ನು ಕರುಣಿಸುವ ದೇವಾಲಯವಿದಾಗಿದೆ.

ದಾರಿದ್ರ್ಯ ನಿವಾರಣೆ

ಇಲ್ಲಿಗೆ  ದೀಪಾವಳಿ, ಶಿವರಾತ್ರಿ ಹಾಗೂ ಶ್ರಾವಣ ಸೋಮವಾರಗಳಂದು ಭಕ್ತಾಧಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಶಿವರಾತ್ರಿ,  ಶ್ರಾವಣ ಸೋಮವಾರ

ದಂತಕಥೆಯ ಪ್ರಕಾರ ಬಖತ್ ಸಿಂಗ್ ಎಂಬ ರಾಜನು ಕಪ್ಪೆಯಿಂದ ಆಶೀರ್ವಾದವನ್ನು ಪಡೆದ ಬಳಿಕ, ಆತನು ಜೀವನದಲ್ಲಿ ಏಳಿಗೆಯಾಯಿತು.

ಬಖತ್ ಸಿಂಗ್ ರಾಜ

ಹೀಗಾಗಿ ಆ ದೈವಿಕ ಕಪ್ಪೆಯ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಾಣ ಮಾಡಿದನು ಎನ್ನಲಾಗಿದೆ.

ಕಪ್ಪೆಯ ಗೌರವಾರ್ಥ