ಈ ತುಳುವೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ 9 ಕಿಲೋಮೀಟರ್ ದೂರದ ಬಸ್ರೂರಿನಲ್ಲಿದೆ.

05 December 2023

Author: Preeti Bhat Gunavanthe

 ಈ ಪ್ರದೇಶವನ್ನು ಮೊದಲು ವಸು ಚಕ್ರವರ್ತಿ ಆಳಿದ್ದರಿಂದ ಈ ಊರಿಗೆ ಮೊದಲು ವಸುಪುರ ಎಂಬ ಹೆಸರಿತ್ತು.

ತುಳುನಾಡಿನ ಮೂಲ ದೇವರು ಎಂದು ಕರೆಯಲ್ಪಡುವ ಈ ದೇವರು ತುಂಬಾ ಶಕ್ತಿಶಾಲಿ. 

1000 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನಕ್ಕೆ ಯಾವುದೇ ಗರ್ಭಗುಡಿ ಇಲ್ಲ.

ಈ ದೇವಳಕ್ಕೆ 4 ದಿಕ್ಕಿನಿಂದಲೂ ರಕ್ಷಣೆ ಕೊಡುತ್ತಿರುವುದು 250 ವರ್ಷ ಹಳೆಯದಾದ ಆಲದ ಮರ.

ದೇವರ ಬಳಿ ಒಬ್ಬರೇ ಹೋಗುವಷ್ಟು ಮಾತ್ರ ಜಾಗವಿದ್ದು, ಅದರ ಮುಂದೆಯೇ ಕಲ್ಲಿಂದ ಕೆತ್ತಿದ ನಂದಿಯ ವಿಗ್ರಹವಿದೆ.

ಪ್ರತಿದಿನ ಪೂಜೆ ಇದ್ದು,ಶಿವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಗಳು ಇಲ್ಲಿ ನಡೆಯುತ್ತವೆ. 

ಈ ಸ್ಥಳದ ಜೀರ್ಣೋದ್ಧಾರಕ್ಕೆ ದೇವರಲ್ಲಿ ಸಮ್ಮತಿ ಸಿಕ್ಕಿಲ್ಲ. ಹಾಗಾಗಿ ಈ ದೇವಸ್ಥಾನ ತನ್ನ ಮೂಲ ರೂಪದಲ್ಲಿಯೇ ಇದೆ.