ಶುಕ್ರವಾರ ಜನಿಸಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

08 December 2023

Author: Preeti Bhat Gunavanthe

ಶುಕ್ರವಾರವನ್ನು ಆಳುವವನು ಶುಕ್ರ.

ಶುಕ್ರವಾರ ಹುಟ್ಟಿದವರು ಹೆಚ್ಚು ಸಾಮಾಜಿಕವಾಗಿ ತೊಡಗಿಕೊಳ್ಳುತ್ತಾರೆ.

ಈ ದಿನ ಜನಿಸಿದವರು ಸೌಂದರ್ಯವಂತರಾಗಿದ್ದು, ಅಲಂಕಾರಪ್ರಿಯರೂ ಆಗಿರುತ್ತಾರೆ.

ಶುಕ್ರವಾರ ಹುಟ್ಟಿದವರ ವ್ಯಕ್ತಿತ್ವವು ಆಕರ್ಷಕವಾಗಿದ್ದು ಯಾರನ್ನು ಬೇಕಾದರೂ ಸೆಳೆಯುವಂತಹ ಶಕ್ತಿ ಇವರಲ್ಲಿರುತ್ತದೆ.

ಇವರು ಸುಲಭವಾಗಿ ಹಣ ಸಂಪಾದಾನೆ ಮಾಡುವ ಕೌಶಲವನ್ನು ಹೊಂದಿರುತ್ತಾರೆ.

ಇವರು ಜೀವನದಲ್ಲಿ ಸಹಭಾಗಿತ್ವವನ್ನು ರೂಪಿಸಿಕೊಂಡಲ್ಲಿ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಕಾಣುತ್ತಾರೆ. 

ಜೀವನದಲ್ಲಿ ಬರುವಂತಹ ತೊಂದರೆಗಳನ್ನು ನಿವಾರಿಸಲು ಮತ್ತು ಅದೃಷ್ಟವನ್ನು ಪಡೆಯಲು ಶುಕ್ರವಾರ ದಾನ ಮಾಡಿ.

ಶುಕ್ರವಾರ ಜನಿಸಿದವರು ತಮ್ಮ ಸಂಗಾತಿಯನ್ನು ಸರಿಯಾಗಿಯೇ ಆಯ್ಕೆ ಮಾಡುತ್ತಾರೆ. ಜೀವನದಲ್ಲೂ ಸುಖವಾಗಿರುತ್ತಾರೆ.