ಶನಿವಾರ ಜನಿಸಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

09 December 2023

Author: Preeti Bhat Gunavanthe

ವಾರದ ಏಳನೇ ದಿನವಾದ ಶನಿವಾರವು ಶನಿ ದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ.

ಶನಿಯ ಪ್ರಭಾವ ಉಂಟಾದರೆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾನೆ ಎಂದು ಹೇಳಲಾಗುತ್ತದೆ.

ಈ ದಿನ ಜನಿಸಿದ ವ್ಯಕ್ತಿಯ ಜೀವನವೂ ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. 

ಅವರು ಜೀವನದಲ್ಲಿ ಸದಾ ನಿಶ್ಚಿತ ಮನೋಭಾವದಿಂದ ಕೂಡಿರುತ್ತಾರೆ. ತೆಗೆದುಕೊಳ್ಳುವ ನಿರ್ಧಾರಗಳು ದೃಢತೆಯಿಂದ ಕೂಡಿರುತ್ತದೆ.

ಶನಿವಾರ ಜನಿಸಿದ ವ್ಯಕ್ತಿಗಳು ಅತ್ಯಂತ ಪ್ರಬುದ್ಧ ವ್ಯಕ್ತಿಗಳಾಗಿರುತ್ತಾರೆ.

ಸಂಬಂಧ ಹಾಗೂ ಇನ್ನಿತರ ವಿಷಯಗಳಲ್ಲಿ ತಮ್ಮ ಜವಾಬ್ದಾರಿ ಮರೆಯುವುದಿಲ್ಲ.

ಸಮಯ ನಿರ್ವಹಣೆ ಹಾಗೂ ಕರ್ತವ್ಯ ಪಾಲನೆಯ ಸನ್ನಿವೇಶದಲ್ಲಿ ಬುದ್ಧಿವಂತಿಕೆ ಉಪಯೋಗಿಸುತ್ತಾರೆ.

ಇವರು ಶನಿವಾರದಂದು ಶಿವನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಅದ್ಭುತವಾದ ಫಲಿತಾಂಶಗಳನ್ನು ಪಡೆದುಕೊಳ್ಳುವರು.