ಗಣೇಶ ಹಬ್ಬದಂದು ಇದನ್ನು ಮಾಡಿದರೆ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ

28 August 2024

Author: Ayesha Banu

ಜೀವನದಲ್ಲಿ ಎದುರಾಗುವ ಸಮಸ್ಯೆ, ಅಡೆತಡೆ ನಿವಾರಿಸಲು ಗಣೇಶನನ್ನು ಪೂಜಿಸಲಾಗುತ್ತೆ. ಈ ವರ್ಷ ಗಣೇಶ ಹಬ್ಬ ಸೆ.07ರಂದು ಬಂದಿದೆ. ಈ ದಿನ ಗಣೇಶನನ್ನು ಪೂಜಿಸಿದರೆ ತೊಂದರೆಗಳಿಂದ ಪರಿಹಾರ ಸಿಗುತ್ತದೆ ಎನ್ನಲಾಗಿದೆ.

ಸಂಕಷ್ಟ ಹರ ಗಣಪ

ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಚತುರ್ಥಿಯಂದು ಆಚರಿಸಲಾಗುತ್ತದೆ. ಹಬ್ಬವು ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ನಡುವೆ ಬರುತ್ತದೆ. 

ಗಣೇಶ ಚತುರ್ಥಿ

ಗಣೇಶ ಚತುರ್ಥಿಯ ದಿನದಂದು ಗಣೇಶನ ಪೂಜೆ ಮಾಡುವುದರಿಂದ ಅನೇಕ ಲಾಭಗಳಿವೆ. ನಿಮ್ಮ ಜೀವನದ ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯವಾಗುತ್ತೆ. ತೊಂದರೆಗಳು ದೂರಾಗುತ್ತವೆ.

ಗಣೇಶ ಚತುರ್ಥಿ

ಗಣೇಶ ಚತುರ್ಥಿಯ ದಿನದಂದು ಗಣಪತಿಯನ್ನು ಪೂಜಿಸಿ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಗಣೇಶನನ್ನು ಸಮೃದ್ಧಿಯ ದೇವರು ಎಂದು ಪರಿಗಣಿಸಲಾಗುತ್ತದೆ, ಈ ದಿನದಂದು ಅವನನ್ನು ಪೂಜಿಸುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಗಣೇಶ ಪೂಜೆ

ಗಣೇಶ ಚತುರ್ಥಿಯಂದು "ಓಂ ಗಣ ಗಣಪತಯೇ ನಮಃ" ಅಥವಾ "ಓಂ ವಿಘ್ನೇಶ್ವರಾಯ ನಮಃ" ಎಂಬ ಮಂತ್ರವನ್ನು ಪಠಿಸಿ. ಗಣೇಶನ ಆಶೀರ್ವಾದ ಪಡೆಯಲು ಈ ಮಂತ್ರ ಸಹಕಾರಿ.

ಗಣೇಶ ಮಂತ್ರವನ್ನು ಪಠಿಸಿ

ಗಣೇಶನಿಗೆ ಮನೆಯಲ್ಲಿ ಮಾಡಿದ ಮೋದಕವನ್ನು ಅರ್ಪಿಸಿ. ಮೋದಕವನ್ನು ಗಣೇಶನ ಅಚ್ಚುಮೆಚ್ಚಿನ ನೈವೇದ್ಯವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ.

ಮೋದಕ

ಗಣೇಶ ಚತುರ್ಥಿಯ ದಿನದಂದು ಗಣೇಶ ಚಾಲೀಸವನ್ನು ಪಠಿಸಲು ಮರೆಯದಿರಿ. ಈ ದಿನ ಗಣೇಶ ಚಾಲೀಸ ಪಠಿಸುವುದು ಅತ್ಯಂತ ಮಂಗಳಕರ. ಮತ್ತು ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ.

ಗಣೇಶ ಚಾಲೀಸಾ ಪಠಣ

ಗಣೇಶ ಚತುರ್ಥಿಯ ದಿನದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಅನ್ನ ಅಥವಾ ಬಟ್ಟೆ ಕೊಟ್ಟು ಸಹಾಯ ಮಾಡಬೇಕು. ಈ ದಿನ ದಾನ ಮಾಡುವುದರಿಂದ ಗಣೇಶನ ವಿಶೇಷ ಆಶೀರ್ವಾದ ಸಿಗುತ್ತದೆ.

ದಾನ ಮಾಡಿ