22-11-2023

ಹನುಮಂತನ ಜನ್ಮ ಸ್ಥಳ ಯಾವುದು?

ಭಿನ್ನ ಅಭಿಪ್ರಾಯ

ಹನುಮಂತನ ಜನ್ಮ ಸ್ಥಳದ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಕೆಲವರು ನಾಗ್ಪುರ ಅಂದ್ರೆ ಮತ್ತೆ ಕೆಲವರು ಕರ್ನಾಟಕ ಎನ್ನತ್ತಾರೆ.

ಕಿಷ್ಕಿಂಧೆ

ಹನುಮಂತನು ಕರ್ನಾಟಕದ ಕಿಷ್ಕಿಂಧೆಯಲ್ಲಿ ಜನಿಸಿದನೆಂದು ಅನೇಕರು ಪ್ರತಿಪಾದಿಸಿದ್ದಾರೆ.

ಅಂಜನಾದ್ರಿ ಬೆಟ್ಟ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಹನುಮಾನ್ ಹುಟ್ಟಿದ ಸ್ಥಳ ಎಂದು ಹಲವರ ನಂಬಿಕೆಯಾಗಿದೆ.

ಪ್ರವಾಸಿಗರ ನೆಚ್ಚಿನ ತಾಣ

ಹಂಪಿಯಿಂದ 25 ಕಿ.ಮೀ ದೂರದಲ್ಲಿರುವ ಈ ಬೆಟ್ಟವು ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಮಲಗಿರುವ ತಾಣ. ಇದು ಹಿಂದೂಗಳ ಪ್ರಸಿದ್ಧ ಯಾತ್ರಾ ಕೇಂದ್ರ.

ಅಂಜನೇಯನಿಂದ ಬಂದ ಹೆಸರು

ಹನುಮಂತನನ್ನು ಅಂಜನೇಯ ಎಂದೂ ಕರೆಯುತ್ತಾರೆ. ಹೀಗಾಗಿ ಈ ಬೆಟ್ಟಕ್ಕೆ ಅಂಜನಾದ್ರಿ ಎಂಬ ಹೆಸರು ಬಂದಿದೆ.

550 ಕ್ಕೂ ಹೆಚ್ಚು ಮೆಟ್ಟಿಲು

ಬೆಟ್ಟದ ಮೇಲೆ ಹನುಮಂತನಿಗೆ ಅರ್ಪಿತವಾದ ದೇವಾಲಯವಿದೆ. ಬೆಟ್ಟದ ಶಿಖರ ತಲುಪಲು 550 ಕ್ಕೂ ಹೆಚ್ಚು ಮೆಟ್ಟಿಲುಗಳಿವೆ.

ರಾಮಸೇತುವೆ ಕಲ್ಲು

ಬೆಟ್ಟದ ಮೇಲಿರುವ ದೇವಾಲಯದ ಆವರಣದಲ್ಲಿ ರಾಮಸೇತುವೆ ನಿರ್ಮಿಸಲು ಬಳಸಲಾದ ತೇಲುವ ಕಲ್ಲು ಇದೆ ಎನ್ನಲಾಗುತ್ತೆ. 

ಪ್ರಕೃತಿ ಸೌಂದರ್ಯ

ಬೆಟ್ಟದ ತುದಿಯಲ್ಲಿ ಸಂಚರಿಸುವಾಗ ತಂಪಾದ ಗಾಳಿ, ಹಸಿರ ಸಿರಿ, ತುಂಗಭದ್ರಾ ನದಿ, ಹಂಪಿಯ ಕೆಲವು ಭಾಗ ಮತ್ತು ಋಷ್ಯಮುಖ ಬೆಟ್ಟದ ಸುಂದರ ದೃಶ್ಯ ಮನಸ್ಸಿಗೆ ಖುಷಿ ನೀಡುತ್ತೆ.

ಮಧುಮೇಹಿಗಳು ಈರುಳ್ಳಿ ತಿನ್ನಬಹುದೇ? ಉತ್ತರ ಇಲ್ಲಿದೆ