ಸುಮಾರ 1500 ವರ್ಷಗಳಿಗೂ ಅಧಿಕ ಐತೀಹ್ಯವನ್ನು ಹೊಂದಿರುವ ಇಡಗುಂಜಿಯ ಈ ಪುರಾತನ ಗಣಪತಿ ದೇವಸ್ಥಾನವು ಕರ್ನಾಟಕದ ಕರಾವಳಿ ಭಾಗದ ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣದಲ್ಲೂ ಒಂದಾಗಿದೆ.
Pic Credit - Pintrest
ಶರಾವತಿ ನದಿಯ ಎಡ ದಡದಲ್ಲಿ ಈ ಸ್ಥಳವು ಇರುವುದರಿಂದ ಇದನ್ನು ಇಡಗುಂಜಿ ಎಂದು ಕರೆಯಲಾಯಿತು. ಈ ದೇವಾಲಯವು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದ್ದು, ವರ್ಷಕ್ಕೆ 1 ದಶಲಕ್ಷಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ.
Pic Credit - Pintrest
ಈ ''ಮಹೋತಭಾರ ಶ್ರೀ ವಿನಾಯಕ'' ಸನ್ನಿಧಾನದಲ್ಲಿ ಗಣಹೋಮ, ಕಥೆ ಮಾಡಿಸುವುದರಿಂದ ಸಾಕಷ್ಟು ಲಾಭಗಳಿವೆ ಎಂದು ನಂಬಲಾಗುತ್ತದೆ.
Pic Credit - Pintrest
ಮದುವೆ ಭಾಗ್ಯಕ್ಕಾಗಿ ಇಲ್ಲಿ ಬಂದು ಪ್ರಾರ್ಥನೆ ಮಾಡಲಾಗುತ್ತದೆ. ಮದುವೆ ಆದ ಬಳಿಕ ದಂಪತಿಗಳು ಬಂದು ಕಥೆ, ಗಣಹೋಮ ಮಾಡಿಸುತ್ತಾರೆ. ಇದು ದಾಂಪತ್ಯಕ್ಕೆ ಶುಭ ಫಲಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ.
Pic Credit - Pintrest
ಇನ್ನು ಕೆಲಸ ಸಿಗದವರು ಕೂಡ ಇಲ್ಲಿ ಹರಕೆ ಸಲ್ಲಿಸಿ ಹೋಗುತ್ತಾರೆ. ಕೆಲಸ ಸಿಕ್ಕಿದ ಬಳಿಕ ಪಂಚಖಾದ್ಯ ಸೇವೆ ಸಲ್ಲಿಸುತ್ತಾರೆ. ಇನ್ನು ಕೆಲವರು ಸತ್ಯಗಣಪತಿ ಕಥೆ ಮಾಡಿಸುತ್ತಾರೆ.
Pic Credit - Pintrest
ಇನ್ನು ಜಾಗದ ಸಮಸ್ಯೆ ಅಥವಾ ಮನೆ ಸಮಸ್ಯೆಗಳಿರುವವರು ಕೂಡ ಇಲ್ಲಿಗೆ ಬಂದು ಸಮಸ್ಯೆ ಬಗೆಹರಿಸುವಂತೆ ಗಣಪತಿಯಲ್ಲಿ ಕೇಳಿಕೊಳ್ಳುತ್ತಾರೆ.
Pic Credit - Pintrest
ಎಷ್ಟೋ ವರುಷಗಳಿಂದ ಮಕ್ಕಳ ಭಾಗ್ಯ ಇಲ್ಲದೆ ಕೊರಗುತ್ತಿರುವವರೂ ಕೂಡ ಇಲ್ಲಿಗೆ ಬಂದು ಮಹಾಗಣಪತಿ ದೇವರ ಆಶೀರ್ವಾದ ಪಡೆಯಬಹುದು.