ಮೃತಪಟ್ಟವರಿಗೆ ಹೆಗಲು ಕೊಡುವುದು ತಪ್ಪಾ? ಪುರಾಣದಲ್ಲಿ ಹೇಳಿರುವುದೇನು?
2 November 2024
Pic credit - Pinterest
Preethi Bhat
ಮೃತಪಟ್ಟವರಿಗೆ ಹೆಗಲು ಕೊಡಬಹುದೇ ಅಥವಾ ಅದು ತಪ್ಪೇ? ಯಾರು ಕೊಡಬೇಕು? ಎನ್ನುವಂತಹ ಪ್ರಶ್ನೆ ಕೆಲವರಲ್ಲಿ ಮೂಡುತ್ತದೆ.
Pic credit - Pinterest
ಪುರಾಣಗಳಲ್ಲಿ ಈ ಬಗ್ಗೆ ಇರುವ ಉಲ್ಲೇಖದ ಕುರಿತು ದೈವಿಕ್ ಡಿ. ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Pic credit - Pinterest
ಮೃತಪಟ್ಟವರಿಗೆ ಹೆಗಲು ಕೊಡುವುದಕ್ಕೆ ಕೆಲವರು ಹಿಂಜರಿಯುತ್ತಾರೆ. ಆದರೆ ಪುರಾಣಗಳಲ್ಲಿ ಇದೊಂದು ಪುಣ್ಯದ ಕೆಲಸ ಎನ್ನಲಾಗುತ್ತದೆ.
Pic credit - Pinterest
ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ, ಮೃತಪಟ್ಟವರಿಗೆ ಹೆಗಲು ಕೊಟ್ಟರೆ ನೀವು ಹಿಂದೆ ಮಾಡಿದ ಪಾಪ ಕರ್ಮಗಳನ್ನು ಕ್ಷಮಿಸಲಾಗುತ್ತದೆ.
Pic credit - Pinterest
ನಂಬಿಕೆಯ ಪ್ರಕಾರ, ನೀವು ಮಾಡಿರುವ ಪಾಪ ಕರ್ಮಗಳನ್ನು ಆ ಮೃತಪಟ್ಟ ವ್ಯಕ್ತಿ ತೆಗೆದುಕೊಂಡು ಹೋಗುತ್ತಾನೆ ಎಂದು ಹೇಳಲಾಗುತ್ತದೆ.
Pic credit - Pinterest
ನೀವು ಮುಂದೆ ಮಾಡುವ ಒಳ್ಳೆಯ ಕೆಲಸಕ್ಕೂ ತಕ್ಕನಾದ ಪ್ರತಿಫಲ ಸಿಗುತ್ತದೆ. ಪೂರ್ತಿಯಾಗಿ ಪುಣ್ಯ ಫಲ ನಿಮ್ಮದಾಗುತ್ತದೆ.
Pic credit - Pinterest
ನೀವು ಹೆಗಲು ಕೊಟ್ಟು ನಡೆಯುವಂತಹ ಒಂದೊಂದು ಹೆಜ್ಜೆಯೂ ಒಂದು ಯಜ್ಞ ಮಾಡಿದಾಗ ಸಿಗುವ ಪುಣ್ಯಕ್ಕೆ ಸಮನಾಗಿರುತ್ತದೆ.
Pic credit - Pinterest
Next:
ಮಧುಮೇಹ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಎಲೆಯ ಕಷಾಯವೇ ಮದ್ದು