ಈಶಾನ್ಯ ಏಷ್ಯ ಭಾಗದ ಪುಟ್ಟ ದೇಶವಾದ ಲಾವೋಸ್ 2024ರ ಜುಲೈ 27ರಂದು ಅಯೋಧ್ಯೆ ಬಾಲರಾಮನಿಗೆ ಗೌರವಾರ್ಥವಾಗಿ ಅಂಚೆ ಚೀಟಿ ಬಿಡುಗಡೆ ಮಾಡಿತು. ಬೇರೆ ಯಾವ ದೇಶಗಳಲ್ಲಿ ಹಿಂದೂ ದೇವ ದೇವತೆಯರನ್ನು ಗೌರವಿಸಲಾಗಿದೆ ನೋಡಿ...
Pic credit: Google
ಯೂರೋಪ್ನ ಹಿಂದಿನ ಚೆಕೋಸ್ಲಾವಾಕಿಯಾ (ಇಂದಿನ ಚೆಕ್ ರಿಪಬ್ಲಿಕ್) 2009ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿನ ಹಿಂದೂ ಪುರಾಣ ಕಥೆಗಳಿಗೆ ಗೌರವವಾಗಿ ಬಿಡುಗಡೆ ಮಾಡಿದ ಅಂಚೆ ಚೀಟಿ ಇದು.
Pic credit: Twitter
ಹಿಂದೂ ಧರ್ಮದೊಂದಿಗೆ ಐತಿಹಾಸಿಕ ನಂಟು ಹೊಂದಿರುವ ಇಂಡೋನೇಷ್ಯಾ 1971ರಲ್ಲಿ ರಾಮಾಯಣ ಉತ್ಸವದ ಅಂಗವಾಗಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿತ್ತು. ಅದರಲ್ಲಿ ರಾಮ ಸೀತೆಯ ಈ ಸ್ಟ್ಯಾಂಪ್ ನೋಡಿ.
Pic credit: Twitter
ಹಿಂದೂ ಧರ್ಮ ಮತ್ತು ಭಾರತದ ನಂಟಿರುವ ಮತ್ತೊಂದು ಏಷ್ಯನ್ ದೇಶವಾದ ಕಾಂಬೋಡಿಯಾದಲ್ಲಿ ವಿಷ್ಣುವಿನ ಮತ್ಸ್ಯಾವತಾರವನ್ನು ಬಿಂಬಿಸುವ ಒಂದು ಪೋಸ್ಟಲ್ ಸ್ಟ್ಯಾಂಪ್ ಇದು.
Pic credit: Twitter
ಹಿಂದಿನ ಪೂರ್ವ ಜರ್ಮನಿಯಲ್ಲಿ ಬಿಡುಗಡೆ ಆದ ಅಂಚೆ ಚೀಟಿಗಳಿವು. ಮಹಾವೀರ, ರಾಧೆ, ದುರ್ಗೆ ಮತ್ತು ರಾಗಣಿಯ ಚಿತ್ರಗಳನ್ನು ಈ ಸ್ಟ್ಯಾಂಪ್ಗಳಲ್ಲಿ ಕಾಣಬಹುದು.
Pic credit: Twitter
ಆಗ್ನೇಯ ಏಷ್ಯನ್ ದೇಶವಾದ ಥಾಯ್ಲೆಂಡ್ ಕೂಡ ಹಿಂದೂ ಧರ್ಮದೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದೆ. ಅಂತೆಯೇ, ಈ ಅಂಚೆ ಚೀಟಿ ಆ ನಂಟಿನ ಕಥೆ ಹೇಳುತ್ತದೆ.
Pic credit: Twitter
ಕೆರಿಬಿಯನ್ ದ್ವೀಪ ರಾಷ್ಟ್ರಗಳಾದ ಗಯಾನ, ಆಂಟಿಗುವಾ ಬಾರ್ಬಡಾಸ್ನಲ್ಲಿ ಹಿಂದೂ ಧರ್ಮೀಯರು ಶತಶತಮಾನಗಳಿಂದ ನೆಲಸಿದ್ದಾರೆ. ಇವರು ತಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡಿರುವುದಕ್ಕೆ ಈ ಸ್ಟ್ಯಾಂಪ್ಗಳು ಸಾಕ್ಷಿ.