16 April 2025

Pic credit - Pintrest

Author: Akshatha Vorkady

ವಾಸ್ತು ಪ್ರಕಾರ  ಮಕ್ಕಳ ಸ್ಟಡಿ ರೂಮ್‌ ಹೇಗಿರಬೇಕು?

ಪೋಷಕರು ತಮ್ಮ ಮಕ್ಕಳಿಗಾಗಿ ಅಧ್ಯಯನ ಕೊಠಡಿಯನ್ನು ನಿರ್ಮಿಸುತ್ತಿದ್ದರೆ ವಾಸ್ತು ತಜ್ಞರ ಸಲಹೆಗಳನ್ನು ಪಡೆಯುವುದು ತುಂಬಾ ಅಗತ್ಯ. 

ವಾಸ್ತು ತಜ್ಞರ ಸಲಹೆ

Pic credit - Pintrest

ಯಾಕೆಂದರೆ ಮಕ್ಕಳ ಭವಿಷ್ಯ ಅವರ ಓದಿನ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಆ ಕೊಠಡಿ ಸಕಾರಾತ್ಮಕ ಶಕ್ತಿಯಿಂದ ತುಂಬಿರಲಿ.

ಸಕಾರಾತ್ಮಕ ಶಕ್ತಿ

Pic credit - Pintrest

ವಾಸ್ತು ಪ್ರಕಾರ, ಮಕ್ಕಳ ಕೋಣೆಯ ಬಣ್ಣ ತಿಳಿ ಹಸಿರು ಅಥವಾ ತಿಳಿ ನೀಲಿ ಅಥವಾ ತಿಳಿ ಹಳದಿ ಬಣ್ಣದ್ದಾಗಿರಬೇಕು. ಗಾಢ ಬಣ್ಣ ಬಳಸಬೇಡಿ.

ಗಾಢ ಬಣ್ಣ ಬೇಡ

Pic credit - Pintrest

ಅಧ್ಯಯನ ಕೊಠಡಿ ವಿಶಾಲವಾಗಿರಲಿ,  ಸೂರ್ಯನ ಬೆಳಕು ಹಾಗೂ ಶುದ್ದ ಗಾಳಿ ಬರಲು ಕಿಟಕಿ ಇಡುವುದು ಅಗತ್ಯ. ಉಸಿರುಗಟ್ಟಿಸುವ ವಾತಾವರಣ ಬೇಡ.

ವಿಶಾಲವಾಗಿರಲಿ

Pic credit - Pintrest

ಅಧ್ಯಯನ ಕೊಠಡಿಯ ಗೋಡೆಗೆ ತಿಳಿ ಬಣ್ಣಗಳು ಮಕ್ಕಳ ಕೋಣೆಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಈ ಎಲ್ಲಾ ಬಣ್ಣಗಳು ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತವೆ.

ಏಕಾಗ್ರತೆ

Pic credit - Pintrest

ತಿಳಿ ಹಳದಿ ಬಣ್ಣವನ್ನು ಶಿಕ್ಷಣ ಮತ್ತು ಜ್ಞಾನಕ್ಕೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ತಿಳಿ ಹಸಿರು ಬಣ್ಣವು ಪ್ರಕೃತಿ ಮತ್ತು ಶಾಂತಿ ಸಂಕೇತಿಸುತ್ತದೆ. 

ತಿಳಿ ಬಣ್ಣ

Pic credit - Pintrest

ನಿಮ್ಮ ಮಕ್ಕಳು ಅಧ್ಯಯನ ಮಾಡುವಾಗ ಪೂರ್ವದ ಕಡೆಗೆ ಮುಖ ಮಾಡಲು ಸಹಾಯವಾಗುವಂತೆ ಸ್ಟಡಿ ಟೇಬಲ್​​​ ಹಾಗೂ ಕುರ್ಚಿಯನ್ನು ಇರಿಸಿ.

ಪೂರ್ವದ ಕಡೆಗೆ ಮುಖ 

Pic credit - Pintrest

ಸ್ಟಡಿ ರೂಮ್‌ ಯಾವಾಗಲೂ ಸ್ವಚ್ಛವಾಗಿರಲಿ. ಅಲ್ಲಲ್ಲಿ ಪೆನ್ನು, ಸ್ಟೇಷನರಿಗಳು ಅಥವಾ ನೋಟ್‌ಬುಕ್‌ ಹರಡಿಕೊಳ್ಳದಂತೆ ನೋಡಿಕೊಳ್ಳಿ. ಎಲ್ಲವನ್ನೂ ಒಂದೆಡೆ ಜೋಡಿಸುವುದು ತುಂಬಾ ಮುಖ್ಯ.

ಸ್ವಚ್ಛವಾಗಿರಲಿ

Pic credit - Pintrest