ಬೆಂಗಳೂರಿನ ಪ್ರಸಿದ್ಧ ಹನುಮಾನ್‌ ದೇವಾಲಯಗಳಿವು
TV9 Kannada Logo For Webstory First Slide

11 April 2025

Pic credit - Pintrest

Author: Akshatha Vorkady

ಬೆಂಗಳೂರಿನ ಪ್ರಸಿದ್ಧ ಹನುಮಾನ್‌ ದೇವಾಲಯಗಳಿವು

ಈ ವರ್ಷ ಏಪ್ರಿಲ್ 12 ಅಂದರೆ ನಾಳೆ ಹನುಮ ಜಯಂತಿಯನ್ನು ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

Pic credit - Pintrest

ನೀವು ಬೆಂಗಳೂರಿನವರಾಗಿದ್ದರೆ ಈ ಪ್ರಸಿದ್ಧ ಹನುಮಾನ್‌ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳಿ. 

Pic credit - Pintrest

ಹನುಮಂತ ನಗರದಲ್ಲಿರುವ ರಾಮಾಂಜನೇಯ ಗುಡ್ಡಕ್ಕೆ ಭೇಟಿ ನೀಡಿ. 9 ಮೀ ಉದ್ದದ ಹನುಮಂತ ಮತ್ತು ರಾಮ ಪರಸ್ಪರ ತಬ್ಬಿಕೊಂಡಿರುವ ಬೃಹತ್ ಪ್ರತಿಮೆ ಇಲ್ಲಿದೆ. 

Pic credit - Pintrest

ಬಸವನಗುಡಿಯ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದ ಹನುಮಂತನ ಪ್ರತಿಮೆ ಸುಮಾರು 18 ಅಡಿಗಳಷ್ಟಿದ್ದು, ಇದು ಬೆಂಗಳೂರಿನಲ್ಲೇ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ.

Pic credit - Pintrest

ಮೈಸೂರು ರಸ್ತೆಯಲ್ಲಿರುವ ಗಾಲಿ ಆಂಜನೇಯ ಸ್ವಾಮಿ ದೇವಸ್ಥಾನವು ಸುಮಾರು 600 ವರ್ಷಗಳ ಹಿಂದೆ ಕನಕದಾಸರ ಗುರು, ಶ್ರೀ ವ್ಯಾಸ ರಾಯರು ನಿರ್ಮಿಸಿದರು ಎಂದು ಉಲ್ಲೇಖವಿದೆ.

Pic credit - Pintrest

ದೊಡ್ಡ ಬಾಣಸವಾಡಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ 150 ವರ್ಷಗಳಷ್ಟು ಹಳೆಯದು. ಅಲ್ಲದೆ, ದೇವಾಲಯವನ್ನು ವಿಶಿಷ್ಟ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. 

Pic credit - Pintrest

ಮಹಾಲಕ್ಷ್ಮಿಪುರಂ ಲೇಔಟ್​​ನ ಪ್ರಸನ್ನ ವೀರಾಂಜನೇಯ ದೇವಸ್ಥಾನ ಹನುಮಂತನ ಅದ್ಭುತ ವಿಗ್ರಹವು 22 ಅಡಿ ಎತ್ತರ ಮತ್ತು 16 ಅಡಿ ಅಗಲವಿದೆ.

Pic credit - Pintrest

ರಾಗಿಗುಡ್ಡೆ ಆಂಜನೇಯ ಸ್ವಾಮಿ ದೇವಾಲಯವೂ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಜಯನಗರದ 9ನೇ ಬಡಾವಣೆಯಲ್ಲಿ ಈ ದೇವಾಲಯವಿದೆ.

Pic credit - Pintrest