26-12-2023

ದತ್ತಾತ್ರೆಯ ಜಯಂತಿಯ ಮಹತ್ವ ಏನು ? ಇಲ್ಲಿದೆ ನೋಡಿ

Author: Preeti Bhat Gunavanthe

Pic Credit - Pintrest

ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಸಂಯೋಜಿತ ರೂಪವೆಂದು ಪರಿಗಣಿಸಲ್ಪಟ್ಟ ಭಗವಾನ್ ದತ್ತಾತ್ರೇಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.

Pic Credit - Pintrest

ಈ ಬಾರಿ ದತ್ತಾತ್ರೆಯ ಜಯಂತಿಯನ್ನು ಡಿಸೆಂಬರ್ 26 ರಂದು ಆಚರಿಸಲಾಗುತ್ತದೆ.

Pic Credit - Pintrest

ಸತಿ ಅನುಸೂಯೆಯ ಗರ್ಭದಿಂದ ಈ ದಿನ ಭಗವಾನ್ ದತ್ತಾತ್ರೇಯ ಜನಿಸಿದನೆಂದು ನಂಬಲಾಗುತ್ತದೆ.  

Pic Credit - Pintrest

ದತ್ತಾತ್ರೆಯ ಜಯಂತಿಯನ್ನು ದೇಶದ ಹಲವು ಭಾಗಗಳಲ್ಲಿ ಆಚರಣೆ ಮಾಡುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

Pic Credit - Pintrest

ದತ್ತಾತ್ರೇಯ ಜಯಂತಿಯನ್ನು ಅತ್ಯಂತ ಮಹತ್ವದ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ತ್ರಿದೇವ ಅಂದರೆ ದತ್ತಾತ್ರೇಯನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. 

Pic Credit - Pintrest

ಈ ದಿನ ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ಭಕ್ತನ ಕಷ್ಟಗಳು ದೂರವಾಗಿ ಆತ ಸುಖದ ಹಾದಿಯಲ್ಲಿ ಸಾಗುತ್ತಾನೆ ಎಂದು ನಂಬಲಾಗಿದೆ.

Pic Credit - Pintrest

ದತ್ತಾತ್ರೇಯನನ್ನು ಪೂಜಿಸುವುದರಿಂದ ಮನುಷ್ಯ ತನ್ನ ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ ಎಂದೂ ಹೇಳಲಾಗುತ್ತದೆ. 

Pic Credit - Pintrest

ಭಾರತದಲ್ಲಿ ದತ್ತಾತ್ರೇಯರಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ಮಹಾರಾಷ್ಟ್ರದಲ್ಲಿ ಅವರನ್ನು ಮುಖ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. 

Pic Credit - Pintrest