28-12-2023

ಸಂಕಷ್ಟಹರ ಚತುರ್ಥಿ ಯಾವಾಗ? ಹೇಗೆ ಆಚರಣೆ ಮಾಡಬೇಕು?

Author: Preeti Bhat Gunavanthe

Pic Credit - Pintrest

ಈ ಬಾರಿ ಸಂಕಷ್ಟಹರ ಚತುರ್ಥಿಯನ್ನು ಡಿಸೆಂಬರ್ 30ರಂದು ಆಚರಣೆ ಮಾಡಲಾಗುತ್ತದೆ.

Pic Credit - Pintrest

ಕೃಷ್ಣ ಪಕ್ಷದ ಚತುರ್ಥಿಯಾದ್ದರಿಂದ ಇದನ್ನು ಸಂಕಷ್ಟ ಚತುರ್ಥಿ ಅಥವಾ ಸಂಕಷ್ಟಹರ ಚತುರ್ಥಿ ಎಂದು ಕರೆಯುತ್ತಾರೆ.

Pic Credit - Pintrest

ಈ ದಿನ ಗಣೇಶನನ್ನು ಮೆಚ್ಚಿಸಲು ಚತುರ್ಥಿ ಉಪವಾಸವನ್ನು ಆಚರಿಸಲಾಗುತ್ತದೆ. 

Pic Credit - Pintrest

ಸಂಸ್ಕೃತ ಭಾಷೆಯಲ್ಲಿ ಸಂಕಷ್ಟ ಎಂಬ ಪದದ ಅರ್ಥ ಕಷ್ಟದ ಸಮಯಗಳಿಂದ ಮುಕ್ತಿ ನೀಡುವುದು ಎಂಬುದಾಗಿದೆ. ಹಾಗಾಗಿ ಈ ದಿನ ಎಲ್ಲ ಕಷ್ಟಗಳನ್ನು ಪರಿಹರಿಸು ಎಂದು ಕೇಳಿಕೊಳ್ಳಲಾಗುತ್ತದೆ.

Pic Credit - Pintrest

ವ್ರತವು ಸೂರ್ಯೋದಯದ ಸಮಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಚಂದ್ರನನ್ನು ನೋಡಿದ ನಂತರ ಮತ್ತು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮುರಿಯಲಾಗುತ್ತದೆ.

Pic Credit - Pintrest

ಗಣೇಶನ ವಿಗ್ರಹಗಳನ್ನು ದುರ್ವೆ ಹುಲ್ಲು ಮತ್ತು ತುಂಬೆ ಹೂವುಗಳಿಂದ ಅಲಂಕರಿಸಲಾಗುತ್ತದೆ. ಮೋದಕ ಮಾಡಿ ನೈವೇದ್ಯ ಮಾಡಲಾಗುತ್ತದೆ.

Pic Credit - Pintrest

ಸಂಕಷ್ಟ ಚತುರ್ಥಿಯ ಸಂದರ್ಭದಲ್ಲಿ ‘ಗಣೇಶ ಅಷ್ಟೋತ್ತರ’ ಪಠಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. 

Pic Credit - Pintrest

ಈ ದಿನ ಚಂದ್ರೋದಯದ ಸಮಯ ರಾತ್ರಿ 9.12.

Pic Credit - Pintrest