ಉಡುಪಿಯಲ್ಲಿ ನಡೆದ ಅಪರೂಪದ ಕೋಲ; ಕಣ್ತುಂಬಿಕೊಂಡ ಸಾವಿರಾರು ಭಕ್ತರು

27 Dec 2023

Author: Kiran Hanumant Madar

ಕತ್ತಲು ರಾತ್ರಿ, ಬೆಂಕಿಯ ಕೋಟೆ ನಡುವೆ ದೈವದ ಸವಾರಿ, ಈ ಗಂಭೀರ ನಡುಗೆಯ ವಿಸ್ಮಯಕಾರಿ ದೈವವನ್ನು ಗಂಗೆನಾಡಿ ಕುಮಾರ ಅಥವಾ ಒಡಿಲ್ತಾಯ ದೈವವೆಂದು ಕರೆಯುತ್ತಾರೆ.

ಒಡಿಲ್ತಾಯ ದೈವ

ತುಳುನಾಡಲ್ಲಿ ನಾಲ್ನೂರಕ್ಕೂ ಅಧಿಕ ದೈವಗಳ ಆರಾಧನೆ ನಡೆಯುತ್ತದೆ. ಈ ಪೈಕಿ ಗಂಗೆನಾಡಿ ಕುಮಾರ ಎಂಬ ದೈವದ ಆರಾಧನೆ ವಿಶೇಷವಾದದ್ದು.

ನಾಲ್ನೂರಕ್ಕೂ ದೈವ

ತಮ್ಮ ಕುಟುಂಬ ದೈವವನ್ನು ಬರಮಾಡಿಕೊಂಡು, ಬೇಕು ಬೇಕಾದ ಪೂಜೆ ಮತ್ತು ಆತಿಥ್ಯ ಮಾಡುವ ಪದ್ಧತಿಯನ್ನು ತುಳುನಾಡಿನಲ್ಲಿ ಕೋಲ ಎನ್ನುತ್ತಾರೆ.

ಕೋಲ

ಉಡುಪಿಯ ತೊಟ್ಟಂ ಸಮೀಪ ನಡೆದ ಒಂದು ಅಪರೂಪದ ಒಡಿಲ್ತಾಯ ದೈವಜಾತ್ರೆ ನಡೆಯೋದು ತುಂಬಾನೆ ಅಪರೂಪ.

ಉಡುಪಿ

ತನ್ನನ್ನು ನಂಬಿದ ಕುಟುಂದವರು ಕೊಟ್ಟ ಕೋಲದಿಂದ ಸಂತೃಪ್ತವಾದ ದೈವ, ಈ ರೀತಿ ನರ್ತನ ಮಾಡುತ್ತಿದೆ.

ಕುಟುಂಬ

 ಬಿಲ್ಲವ ಮನೆತನಗಳಲ್ಲಿ ಈ ದೈವ ವಿಶೇಷವಾಗಿ ಕಾಣಸಿಗುತ್ತೆ. ಮನೆಯಲ್ಲಿ ಯಾವುದೇ ಗಂಡು ಮಕ್ಕಳಿಗೆ ಮದುವೆ ನಡೆದರೆ ಅದರ ಪ್ರಯುಕ್ತ ಈ ದೈವಕ್ಕೆ ನೇಮ ನಡೆಯುತ್ತೆ.

ದೈವಕ್ಕೆ ನೇಮ 

ಇಲ್ಲಿ ವಿಶೇಷ ಆಕರ್ಷಣೆ ಎಂದರೆ ತೆಂಗಿನ ಗರಿಗಳಿಂದ ಕಟ್ಟಲಾದ ಸಾವಿರಾರು ದೊಂದಿಗಳನ್ನು ಬೆಳಗಿಸಿ ಅದರ ಬೆಳಕಿನ ಮಧ್ಯದಲ್ಲಿ ಈ ದೈವದ ಕೊಡಿ ಅಡಿಗೆ ಅಗಮಿಸುತ್ತದೆ.

ಸಾವಿರಾರು ಜನ

ಮನೆಯ ಸದಸ್ಯರನ್ನು ಗುರುತಿಸಿ ಅವರಿಗೆ ದೈವಾವೇಶ ಬರಿಸುತ್ತದೆ. ಹೀಗಾಗಿ ಹೂಡೆಯಲ್ಲಿ ನಡೆದ ಈ ಕೋಲವು ಬಹಳ ವಿಶೇಷವಾಗಿದೆ.

 ದೈವಾವೇಶ 

 ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹರಿದು ಬಂದ ಜನಸಾಗರ