ಪ್ರತಿ ಸೋಮವಾರ ಸಂಜೆ ಯಾವ ದೇವರನ್ನು ಪೂಜಿಸಬೇಕು? ಇದರಿಂದ ಸಿಗುವ ಫಲಾಫಲಗಳೇನು?

4 December 2023

Author: Preeti Bhat Gunavanthe

ಸೋಮವಾರದ ದಿನ ಭಗವಾನ್‌ ಶಿವನನ್ನು ಪೂಜಿಸಲಾಗುತ್ತದೆ. 

ಇನ್ನು ಕೆಲವು ನಂಬಿಕೆಗಳ ಪ್ರಕಾರ, ಚಂದ್ರನನ್ನು ಕೂಡ ಈ ದಿನ ಪೂಜಿಸಲಾಗುತ್ತದೆ.  

ಜೀವನದಲ್ಲಿ ಶಾಂತಿ, ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಬಯಸುವವರು ಈ ದಿನ ಶಿವನ ಮೊರೆ ಹೋಗುತ್ತಾರೆ.

ಈ ದಿನ ಶಿವ ಭಕ್ತರು ಉಪವಾಸ ವ್ರತವನ್ನು ಸಹ ಕೈಗೊಳ್ಳುತ್ತಾರೆ.

ಸೋಮವಾರ ಮುಂಜಾನೆ ಬೇಗ ಎದ್ದು ಶುಚಿಯಾಗಿ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಶಿವನನ್ನು ಪೂಜಿಸಬೇಕು. 

ಶಿವ ಪೂಜೆಗೆ ಬಿಳಿ ಬಣ್ಣದ ಹೂವು, ಬಿಲ್ವಪತ್ರೆ, ಶ್ರೀಗಂಧವನ್ನು ಬಳಸುವುದು ಉತ್ತಮ.

ಈ ದಿನ ಪೂಜೆ ಮಾಡುವಾಗ " ಓಂ ನಮಃ ಶಿವಾಯ" ಎಂಬ ಮಂತ್ರ ಘೋಷ ಮಾಡಬೇಕು. 

ಈ ದಿನ ಶಿವಲಿಂಗಕ್ಕೆ ಗಂಗಾಜಲ ಅಭಿಷೇಕ ಮತ್ತು ಕ್ಷೀರಾಭಿಷೇಕ ಮಾಡುವುದರಿಂದ ಮಾಡಿದ ಪಾಪ ಪರಿಹಾರವಾಗುತ್ತದೆ.