ಮಂಗಳವಾರ ಯಾವ ದೇವರನ್ನು ಪೂಜಿಸಬೇಕು? ಅದರ ಫಲಾಫಲಗಳೇನು?

5 December 2023

Author: Preeti Bhat Gunavanthe

ಮಂಗಳವಾರದಂದು ಹನುಮಂತನ ಪೂಜೆಗೆ ವಿಶೇಷ ಮಹತ್ವವಿದೆ. 

ಹನುಮಂತನನ್ನು ಪೂಜಿಸುವುದರಿಂದ ಕಷ್ಟ ದೂರವಾಗಿ, ಆರೋಗ್ಯದ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ

ಪ್ರತಿ ಮಂಗಳವಾರ ಹನುಮಂತನನ್ನು ಪೂಜಿಸುವುದರಿಂದ ಆಸೆಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.

ಈ ದಿನದಂದು ವಿವಾಹಿತರೂ ಕೂಡ ಬ್ರಹ್ಮಚರ್ಯವನ್ನು ಪಾಲಿಸುವುದರಿಂದ ಹನುಮಂತನ ಆಶಿರ್ವಾದ ಪಡೆಯುತ್ತಾರೆ.

ಹನುಮಂತನನ್ನು ಪೂಜಿಸುವವರು ಪೂಜೆಗೂ ಮುನ್ನ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು.

ಈ ದಿನ ಉಪವಾಸ ಮಾಡುವವರು ಮಾಂಸಾಹಾರ ಮತ್ತು ಮದ್ಯಪಾನ ಸೇವನೆಯಿಂದ ದೂರವಿರಬೇಕು. 

ಹನುಮಂತನನ್ನು ಪೂಜಿಸುವಾಗ ಕಪ್ಪು ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಪೂಜಿಸಬಾರದು. 

ಕೆಂಪು, ಕೇಸರಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಪೂಜೆ ಮಾಡಬಹುದು.