ಈ ಬಾರಿ ಮುಕ್ಕೋಟಿ ದ್ವಾದಶಿಯನ್ನು ಡಿಸೆಂಬರ್ 24 ರಂದು ಆಚರಿಸಲಾಗುತ್ತದೆ.
ಏಕಾದಶಿಯ ಮರು ದಿನವಾದ ದ್ವಾದಶಿಯಂದು ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರು ಬಂದಿದೆ.
ಕಷ್ಟಗಳು ಬಂದರೂ ವಿಚಲಿತರಾಗದೆ ಎಲ್ಲವನ್ನೂ ಸ್ವೀಕರಿಸಿದಾಗ ಹರಿಯು ನಮ್ಮ ಜೊತೆಗೆ ನಿಲ್ಲುತ್ತಾನೆ ಎಂಬ ನಂಬಿಕೆ ಇದೆ.
ಎಷ್ಟೇ ಕಷ್ಟ ಬಂದರೂ ಭಗವದ್ಭಕ್ತರನ್ನು ಶ್ರೀ ಹರಿ ಪೋಷಿಸದೆ ಇರುವುದಿಲ್ಲ ಎಂಬುದೇ ಈ ಮುಕ್ಕೋಟಿ ದ್ವಾದಶಿಯ ಸಂದೇಶವಾಗಿದೆ.
ಈ ದಿನ ಮಹಾವಿಷ್ಣು ಗರುಡ ವಾಹನದ ಮೇಲೆ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ ಎಂಬ ನಂಬಿಕೆಯೂ ಇದೆ.
ಈ ಒಂದು ದ್ವಾದಶಿಯು ಮೂರು ಕೋಟಿ ದ್ವಾದಶಿಗಳಿಗೆ ಸಮವಾದ ಪವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ದ್ವಾದಶಿ ಎನ್ನುತ್ತಾರೆ.
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಹೋಮ, ಹವನ ಜಪ- ತಪಗಳು ನಡೆಯುತ್ತವೆ.
ಈ ದಿನ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಹೋಮ, ಹವನ ಜಪ- ತಪಗಳು ನಡೆಯುತ್ತವೆ.