ವಿಶ್ವಕಪ್-2023 ಎರಡನೇ ಹಂತದಲ್ಲಿದೆ. ಲೀಗ್ ಹಂತದ ಅರ್ಧಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆದರೆ, ಸೆಮಿಫೈನಲ್ ತಲುಪುವ ನಾಲ್ಕು ತಂಡಗಳು ಯಾವುವು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

29 October 2023

ಏತನ್ಮಧ್ಯೆ, 2025 ರಲ್ಲಿ ಪಾಕಿಸ್ತಾನ ಆತಿಥ್ಯ ವಹಿಸಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಐಸಿಸಿ ಬಿಗ್ ಅಪ್​ಡೇಟ್ ನೀಡಿದೆ.

ವಿಶ್ವಕಪ್-2023ರಲ್ಲಿ ಲೀಗ್ ಹಂತದಲ್ಲಿ ಅಗ್ರ 7 ಸ್ಥಾನ ಪಡೆಯುವ ತಂಡಗಳು ನೇರವಾಗಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿವೆ ಎಂದು ಐಸಿಸಿ ಹೇಳಿದೆ.

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ 8 ತಂಡಗಳು ಭಾಗವಹಿಸಲಿವೆ ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಪ್ರದರ್ಶನ ತೀರಾ ಕಳಪೆಯಾಗಿದ್ದು, ಈ ರೀತಿ ಆಡಿದರೆ ಚಾಂಪಿಯನ್ಸ್ ಟ್ರೋಫಿಯನ್ನು ಆಡಲು ಸಾಧ್ಯವಾಗುವುದಿಲ್ಲ.

ಐಸಿಸಿಯ ಈ ಪ್ರಕಟಣೆಯಿಂದಾಗಿ ಹಲವು ಬಲಿಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳುವ ಆತಂಕದಲ್ಲಿವೆ.

ಆ ತಂಡಗಳಲ್ಲಿ ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಜಿಂಬಾಬ್ವೆಯಂತಹ ತಂಡಗಳು ಸೇರಿವೆ. ಏಕೆಂದರೆ ಈ ತಂಡಗಳು ವಿಶ್ವಕಪ್​ಗೆ ಅರ್ಹತೆ ಪಡೆದಿಲ್ಲ.

8 ತಂಡಗಳ ನಡುವೆಚಾಂಪಿಯನ್ಸ್ ಟ್ರೋಫಿ ನಡೆಯಲ್ಲಿದ್ದು, ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ.