ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಜೋಡಿ ದಾಖಲೆ ಬರೆದಿದೆ.

28 October 2023

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸೀಸ್​ಗೆ ಸ್ಫೋಟಕ ಆರಂಭ ಸಿಕ್ಕಿದೆ.

ವಾರ್ನರ್ ಮತ್ತು ಹೆಡ್ ಅಬ್ಬರದಿಂದಾಗಿ ಆಸೀಸ್ ಮೊದಲ 10 ಓವರ್‌ಗಳಲ್ಲಿ 118 ರನ್ ಕಲೆಹಾಕಿದೆ.

ಇದರೊಂದಿಗೆ ಈ ಜೋಡಿಯು ನ್ಯೂಜಿಲೆಂಡ್‌ನ 8 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.

ಅಲ್ಲದೆ ಇದು ವಿಶ್ವಕಪ್​ ಇತಿಹಾಸದಲ್ಲಿ ಪವರ್​ ಪ್ಲೇನಲ್ಲಿ ಕಲೆಹಾಕಿದ ಅತಿದೊಡ್ಡ ಮೊತ್ತ ಕೂಡ ಆಗಿದೆ.

ಈ ಹಿಂದೆ 2015 ರಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಕಳೆದುಕೊಂಡು 116 ರನ್ ಕಲೆ ಹಾಕಿ ಈ ದಾಖಲೆ ಬರೆದಿತ್ತು.

ಇದೇ ವಿಶ್ವಕಪ್​ನಲ್ಲಿ ಶ್ರೀಲಂಕಾ ತಂಡ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ಕಳೆದುಕೊಂಡು 94 ರನ್ ಕಲೆ ಹಾಕಿತ್ತು.

ಭಾರತದ ಕೂಡ ಇದೇ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 94 ರನ್ ಕಲೆಹಾಕಿ ದಾಖಲೆ ಬರೆದಿತ್ತು.