ಗಂಭೀರ್ ಬದಲಿಗೆ ದ್ರಾವಿಡ್ ಕೆಕೆಆರ್ ಮೆಂಟರ್ ಆಗ್ತಾರಾ?

10 July 2024

Pic credit - Google

ಪೃಥ್ವಿಶಂಕರ

Pic credit -  Google

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗುವುದರೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಮೆಂಟರ್ ಹುದ್ದೆ ಖಾಲಿಯಾಗಿದೆ.

ಗಂಭೀರ್ ಮುಖ್ಯ ಕೋಚ್

Pic credit -  Google

ಮಾಧ್ಯಮ ವರದಿಗಳ ಪ್ರಕಾರ, ಕೆಕೆಆರ್ ಫ್ರಾಂಚೈಸಿಯ ಮೆಂಟರ್ ಆಗಿ ಗಂಭೀರ್ ಬದಲಿಗೆ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.

ಕೆಕೆಆರ್​ಗೆ ದ್ರಾವಿಡ್?

Pic credit -  Google

2024 ರ ಸೀಸನ್ ಆರಂಭಕ್ಕೆ ಮುಂಚಿತವಾಗಿ ನೈಟ್ ರೈಡರ್ಸ್‌ನ ಮಾರ್ಗದರ್ಶಕರಾಗಿ ಗಂಭೀರ್ ಅವರನ್ನು ನೇಮಿಸಲಾಯಿತು. ಸಹ-ಮಾಲೀಕ ಶಾರುಖ್ ಅವರಿಗೆ 10 ವರ್ಷಗಳ ಒಪ್ಪಂದದ ಯೋಜನೆಯನ್ನು ನೀಡಿದ್ದರು ಎಂದು ವರದಿಯಾಗಿತ್ತು.

ಶಾರುಖ್ ಆಫರ್

Pic credit -  Google

ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಮುಖ್ಯ ಕೋಚ್ ಆಗುವ ಪ್ರಸ್ತಾಪ ಬಂದ ತಕ್ಷಣ, ಗಂಭೀರ್ ಆಫರ್ ತಿರಸ್ಕರಿಸಲು ಕಷ್ಟವಾಯಿತು.

ಬಿಸಿಸಿಐ ಆಫರ್

Pic credit -  Google

ವರದಿಯ ಪ್ರಕಾರ, ಅನೇಕ ಐಪಿಎಲ್ ಫ್ರಾಂಚೈಸಿಗಳು ದ್ರಾವಿಡ್ ಅವರನ್ನು 2025 ರ ಐಪಿಎಲ್​ಗೂ ಮೊದಲು ಕೋಚ್ ಅಥವಾ ಮೆಂಟರ್ ಆಗಿ ನೇಮಿಸಲು ಉತ್ಸುಕರಾಗಿವೆ.

ದ್ರಾವಿಡ್​ಗೆ ಗಾಳ

Pic credit -  Google

ದ್ರಾವಿಡ್ ಈ ಹಿಂದೆ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮೆಂಟರ್ ಮತ್ತು ಕೋಚ್ ಆಗಿ ಕೆಲಸ ಮಾಡಿದ್ದಾರೆ. ಅವರು ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿಯ ಕೋಚ್ ಆಗಿದ್ದರು. ಆದರೆ 2017 ರಲ್ಲಿ ಹಿತಾಸಕ್ತಿ ಸಂಘರ್ಷದಿಂದಾಗಿ ಹುದ್ದೆಯನ್ನು ತೊರೆದಿದ್ದರು.

ಐಪಿಎಲ್ ಅನುಭವ

Pic credit -  Google

ಐಪಿಎಲ್ ವೃತ್ತಿಜೀವನವನ್ನು ಕೊನೆಗೊಳಿಸಿದ ನಂತರ, ದ್ರಾವಿಡ್ ಅಂಡರ್-19 ಮತ್ತು ಭಾರತ ಎ ತಂಡಗಳು ಸೇರಿದಂತೆ ಭಾರತದ ಜೂನಿಯರ್ ತಂಡಗಳಿಗೆ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.

ಅಂಡರ್ 19 ತಂಡ

Pic credit -  Google

ಆ ಬಳಿಕ 2021 ರಲ್ಲಿ ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.

ಎನ್​ಸಿಎ ಮುಖ್ಯಸ್ಥ