ಸಚಿನ್ ಟು ಧೋನಿ: ಭಾರತೀಯ ಸೇನೆಯಲ್ಲಿರುವ ಆಟಗಾರರ ಪಟ್ಟಿ ಇಲ್ಲಿದೆ

15 Jan 2025

PC: Google   Author: Zahir

ಜನವರಿ 15... ಭಾರತೀಯ ಸೇನಾ ದಿನ. ತಮ್ಮ ಪ್ರಾಣದ ಹಂಗಿಲ್ಲದೇ ಹೋರಾಡಿ ದೇಶಕ್ಕಾಗಿ ಹುತಾತ್ಮರಾದ ವೀರ ಸೈನಿಕರ ನೆನಪಿಗಾಗಿ ಪ್ರತಿ ವರ್ಷ ಜನವರಿ 15ರಂದು ಸೇನಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಜನವರಿ 15

ಈ ದಿನ ನಮ್ಮ ದೇಶದ ಕೆಲ ಕ್ರೀಡಾಪಟುಗಳಿಗೂ ವಿಶೇಷ ದಿನ. ಏಕೆಂದರೆ ಈ ಕ್ರೀಡಾಪಟುಗಳು ಕೂಡ ಭಾರತೀಯ ಸೇನೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರೆಂದರೆ...

ಸೇನೆಯಲ್ಲಿ ಕ್ರೀಡಾಪಟುಗಳು

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗೌರವಾರ್ಥಕ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿದ್ದಾರೆ. ಅಲ್ಲದೆ ಭಾರತೀಯ ಪ್ರಾದೇಶಿಕ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‌ನ ಭಾಗವಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ

ಒಲಿಂಪಿಕ್ಸ್ ಶೂಟಿಂಗ್​ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದುಕೊಟ್ಟ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡ ಭಾರತೀಯ ಸೇನೆಯ ಭಾಗವಾಗಿದ್ದರು. ಅಲ್ಲದೆ 2013 ರವರೆಗೆ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು.

ರಾಜ್ಯವರ್ಧನ್ ಸಿಂಗ್ ರಾಥೋಡ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಭಾರತೀಯ ಸೇನೆಯ ಭಾಗವಾಗಿದ್ದಾರೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. 2010 ರಲ್ಲಿ ಸಚಿನ್ ಅವರಿಗೆ ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಗೌರವ ನೀಡಿ ಸೇನಾ ಸೇವೆಗೆ ಸೇರಿಸಿಕೊಂಡಿದೆ.

ಸಚಿನ್ ತೆಂಡೂಲ್ಕರ್

2008ರ ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಶೂಟರ್ ಅಭಿನವ್ ಬಿಂದ್ರಾ ಅವರಿಗೂ ಭಾರತೀಯ ಸೇನೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಿದೆ.

ಅಭಿನವ್ ಬಿಂದ್ರಾ

1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿದ್ದಾರೆ. ಈ ಗೌರವಾರ್ಥಕ ಹುದ್ದೆಯೊಂದಿಗೆ ಕಪಿಲ್ ದೇವ್ ಭಾರತೀಯ ಸೇನೆಯೊಂದಿಗೆ ಸೇವೆ ಮುಂದುವರೆಸಿದ್ದಾರೆ.

ಕಪಿಲ್ ದೇವ್

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಖ್ಯಾತ ಅಥ್ಲೀಟ್ ನೀರಜ್ ಚೋಪ್ರಾ ಈಗಲೂ ಸೇನೆಯ ಭಾಗವಾಗಿದ್ದಾರೆ. ಅವರು ರಜಪೂತ್ ರೈಫಲ್ಸ್ ಘಟಕದಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ನೈಬ್ ಸುಬೇದಾರ್ ಹುದ್ದೆಯನ್ನು ಹೊಂದಿದ್ದಾರೆ.

ನೀರಜ್ ಚೋಪ್ರಾ

ಗೆಳೆತಿಯ ಆತ್ಮಹತ್ಯೆ, ಹೊಸ ಇನಿಂಗ್ಸ್​: ಯಾರು ಈ ಅಭಿಷೇಕ್ ಶರ್ಮಾ?