ವರ್ಷಕ್ಕೆ 29 ಕೋಟಿ ರೂ.  ತೆರಿಗೆ ಕಟ್ಟಿದ ಬಾಬರ್ ಆಝಂ ಎಷ್ಟು ಕೋಟಿಯ ಒಡೆಯ ಗೊತ್ತಾ?

26 september 2024

Pic credit: Google

ಪೃಥ್ವಿ ಶಂಕರ

Pic credit: Google

ಒಂದು ಸಮಯದಲ್ಲಿ ವಿಶ್ವ ಕ್ರಿಕೆಟ್​ನ ಅಗ್ರ ಬ್ಯಾಟ್ಸ್‌ಮನ್​ಗಳ ಪಟ್ಟಿಯಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದ ಪಾಕ್ ನಾಯಕ ಬಾಬರ್ ಆಝಂ, ಪ್ರಸ್ತುತ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ.

Pic credit: Google

2024 ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಬಾಬರ್ ಆಝಂ ಅವರ ನಾಯಕತ್ವ ಮತೊಮ್ಮೆ ಅಪಾಯದಲ್ಲಿದೆ. ಆದರೆ, ಚಾಂಪಿಯನ್ಸ್ ಟ್ರೋಫಿ ತನಕ ಅವರೇ ನಾಯಕರಾಗಿ ಇರಲಿದ್ದಾರೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.

Pic credit: Google

ಆದಾಗ್ಯೂ ತಮ್ಮ ಹಳೆಯ ಫಾರ್ಮ್​ಗೆ ಮರಳಲು ಪ್ರಯತ್ನಿಸುತ್ತಿರುವ ಬಾಬರ್, ಪಾಕಿಸ್ತಾನದ ದೇಶೀ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈ ನಡುವೆ ಬಾಬರ್ ತೆರಿಗೆ ಪಾವತಿಸಿದ ವಿಚಾರದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

Pic credit: Google

ಬಾಬರ್ ಆಝಂ 2023-24ರಲ್ಲಿ ಆದಾಯ ತೆರಿಗೆ ಇಲಾಖೆಗೆ 29 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ತೆರಿಗೆಯಾಗಿ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

Pic credit: Google

ಇದರ ಮೌಲ್ಯ ಭಾರತೀಯ ರೂಪಾಯಿಗಳಲ್ಲಿ 8.72 ಕೋಟಿ ರೂ. ಆಗಲಿದೆ. ಬಾಬರ್ ಅವರ ಒಟ್ಟು ನಿವ್ವಳ ಮೌಲ್ಯವು ಭಾರತೀಯ ರೂಪಾಯಿಗಳಲ್ಲಿ 41 ಕೋಟಿ ಎಂದು ಹೇಳಲಾಗುತ್ತದೆ.

Pic credit: Google

ಅಂದರೆ, ಪಾಕಿಸ್ತಾನಿ ರೂಪಾಯಿಯಲ್ಲಿ ಇದರ ಮೌಲ್ಯ 136 ಕೋಟಿಗೂ ಹೆಚ್ಚು. ಅಲ್ಲದೆ ಪಾಕ್ ಕ್ರಿಕೆಟ್ ತಂಡದಲ್ಲಿ ಅಧಿಕ ಆದಾಯ ಗಳಿಸುತ್ತಿರುವ ಆಟಗಾರರ ಪಟ್ಟಿಯಲ್ಲಿ ಬಾಬರ್ ಅಗ್ರಸ್ಥಾನದಲ್ಲಿದ್ದಾರೆ.

Pic credit: Google

ಇನ್ನು ಬಾಬರ್ ಆಜಂ ಪಿಟಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಯ ಮೊದಲ ಪಂದ್ಯಕ್ಕೆ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಬಾಬರ್, ಇಂಗ್ಲೆಂಡ್ ವಿರುದ್ಧ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.